ಬೆಂ.ಗ್ರಾ.ಜಿಲ್ಲೆ:ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಉನ್ನತ ಮಟ್ಟದ ಕಂಪೆನಿಗಳಲ್ಲಿ ಇಂಟರ್ನ್ ಶಿಪ್ ನೀಡುವ ಸಲುವಾಗಿ 2024-25 ನೇ ಸಾಲಿನ ಪ್ರಧಾನ ಮಂತ್ರಿ ಇಂಟರ್ನ್ ಶಿಪ್ ಯೋಜನೆ (Prime Minister’s Internship Scheme in Top Companies) ಘೋಷಣೆ ಮಾಡಲಾಗಿದೆ. ಈ ಯೋಜನೆಯಡಿ ಒಂದು ಕೋಟಿ ಯುವಕ/ಯುವತಿಯರಿಗೆ ಇಂಟರ್ನ್ ಶಿಪ್ ಮೂಲಕ ಕೌಶಲ್ಯವನ್ನು ವೃದ್ಧಿಸಲು ಅವಕಾಶ ಕಲ್ಪಿಸಲಾಗಿದೆ.
ಅಸಕ್ತಿ ಇರುವ ಅಭ್ಯರ್ಥಿಗಳು www.pmintership.mca.gov.in ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಏಪ್ರಿಲ್ 15 ರೊಳಗಾಗಿ ಅರ್ಹತೆ ಆಧಾರದ ಮೇಲೆ ಅರ್ಜಿ ಸಲ್ಲಿಸಬಹುದು.
ಆಸಕ್ತಿ ಇರುವ ಯುವಕ/ಯುವತಿಯರ ವಯಸ್ಸು 21 ರಿಂದ 24 ಇರಬೇಕು. SSLC, PUC, ITI, B.A, B.Sc, BBA, B.com, BCA, B.Pharmacy ಇತ್ಯಾದಿ ವಿದ್ಯಾರ್ಹತೆ ಪೂರ್ಣಗೊಂಡಿರಬೇಕು.
ಅರ್ಹತೆ
- ಕುಟುಂಬದ ವಾರ್ಷಿಕ ಆಧಾಯವು 2023-24ಕ್ಕೆ 8ಲಕ್ಷ ಮೀತಿಗೆ ಒಳಪಟ್ಟಿರಬೇಕು.
- ಕುಂಟುಂಬದ ಸದಸ್ಯರಲ್ಲಿ ಯಾವುದೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಲ್ಲದೇ ಸರ್ಕಾರಿ ಸ್ವಾಯಿತ್ಯ ಸಂಸ್ಥೆಗಳಲ್ಲಿ ಖಾಯಂ ನೌಕರರಾಗಿರಬಾರದು.
- ಇಂಟರ್ಶಿಪ್ ತರಬೇತಿಯು 12 ತಿಂಗಳಿಗೆ ಅವಧಿ ಇರುತ್ತದೆ.
- ತರಬೇತಿ ಸರಿಯಾಗಿ ಹಾಜರಾದ ಅಭ್ಯರ್ಥಿಗೆ ತರಬೇತಿ ಅವಧಿಯಲ್ಲಿ ಮಾಸಿಕ 5000/- ಅಭ್ಯರ್ಥಿಯ ಬ್ಯಾಂಕ್ ಖಾತೆಗೆ ಸಂದಾಯಿಸಲಾಗುವುದು.
- ಇಂಟರ್ಶಿಪ್ಗೆ ಆಯ್ಕೆಯಾದ ಅಭ್ಯರ್ಥಿಗಳು ಕಂಪನಿ ಆಯೋಜಿಸಿದ ಸ್ಥಳದಲ್ಲಿ ಹೋಗಿ ತರಬೇತಿ ಪಡೆಯುವುದು.
- ಇಂಟರ್ಶಿಪ್ ಪೂರ್ಣಗೊಂಡ ನಂತರ ಅರ್ಹತೆ ಆಧಾರದ ಮೇಲೆ ರೂ.6000/- ಅಭ್ಯರ್ಥಿಯ ಬ್ಯಾಂಕ್ ಖಾತೆಗೆ ಸಂದಾಯಿಸಲಾಗುವುದು ಹಾಗೂ ಪ್ರಮಾಣ ಪತ್ರ ನೀಡಲಾಗುವುದು.
ಜಿಲ್ಲೆಯ ಆಸಕ್ತಿ ನಿರುದ್ಯೋಗಿ ಯುವಕ/ಯುವತಿಯರು ನೋಂದಾಯಿಸಿಕೊಂಡು ಇಂಟರ್ನ್ ಶಿಪ್ ಪ್ರಯೋಜನ ಪಡೆಯಲು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.