ನವದೆಹಲಿ : ಭಾರತ-ಅಮೆರಿಕ ಸಂಬಂಧ ಸುಧಾರಣೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಕಾರಾತ್ಮಕ ನಡೆ ಶ್ಲಾಘನೀಯ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
“ನಾನು ಮೋದಿ ಅವರೊಂದಿಗೆ ಯಾವಾಗಲೂ ಸ್ನೇಹಿತನಾಗಿರುತ್ತೇನೆ. ಅವರು ಒಬ್ಬ ಮಹಾನ್ ಪ್ರಧಾನಿ. ಅವರು ಅದ್ಭುತ ವ್ಯಕ್ತಿ. ಆದರೆ, ಈ ನಿರ್ದಿಷ್ಟ ಸಂದರ್ಭದಲ್ಲಿ ಅವರು ಇಟ್ಟಿರುವ ಹೆಜ್ಜೆ ನನಗೆ ಇಷ್ಟವಿಲ್ಲ. ಆದರೆ, ಭಾರತ ಮತ್ತು ಅಮೆರಿಕ ನಡುವೆ ವಿಶೇಷ ಸಂಬಂಧವಿದೆ. ಚಿಂತಿಸುವ ಅಗತ್ಯವಿಲ್ಲ” ಎಂದು ಟ್ರಂಪ್ ಓವಲ್ ಕಚೇರಿಯಲ್ಲಿ ತಿಳಿಸಿದ್ದರು.
ಟ್ರಂಪ್ ಅವರ ಈ ಹೇಳಿಕೆ ಬೆನ್ನಲ್ಲೇ ಮೋದಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಅವರ ನಡೆಯನ್ನು ಶ್ಲಾಘಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಸಮಗ್ರ ಹಾಗೂ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಭಾರತ ಹಾಗೂ ಅಮೆರಿಕ ಎದುರುನೋಡುತ್ತಿವೆ” ಎಂದು ಹೇಳಿದ್ದಾರೆ.