ಒಡಿಶಾ: ಸಾಗರೋತ್ತರ ಭಾರತೀಯರಿಗಾಗಿ ಆರಂಭಿಸಿದ ವಿಶೇಷ ಪ್ರವಾಸಿ ರೈಲು ‘ಪ್ರವಾಸಿ ಭಾರತೀಯ ಎಕ್ಸ್‌ಪ್ರೆಸ್’ಗೆ ಪ್ರಧಾನಿ ನರೇಂದ್ರ ಮೋದಿ ಜ.9ರಂದು ಚಾಲನೆ ನೀಡಿದರು.
ಒಡಿಶಾದ ಭುವನೇಶ್ವರದಲ್ಲಿ ನಡೆದ ಪ್ರವಾಸಿ ಭಾರತೀಯ ದಿವಸ್ (ಪಿಬಿಡಿ) ಸಮಾವೇಶ ಉದ್ಘಾಟಿಸಿದ ಮೋದಿ, ಪ್ರವಾಸಿ ಭಾರತೀಯ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು. ರೈಲು ದೆಹಲಿಯ ನಿಜಾಮುದ್ದೀನ್ ರೈಲು ನಿಲ್ದಾಣದಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿ ಅನಿವಾಸಿ ಭಾರತೀಯರನ್ನು ಮೂರು ವಾರಗಳ ಕಾಲ ದೇಶಾದ್ಯಂತ ಅನೇಕ ಪ್ರವಾಸಿ ಮತ್ತು ಧಾರ್ಮಿಕ ಸ್ಥಳಗಳಿಗೆ ಕರೆದೊಯ್ಯುಲಿದೆ.