ಉಡುಪಿ :ಉಡುಪಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಸಚಿವ ದಿನೇಶ್ ಗುಂಡೂರಾವ್ ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಆದಿ ಉಡುಪಿಯಿಂದ ಪ್ರಧಾನಿ ಮೋದಿ ರೋಡ್ ಶೋ ಆರಂಭವಾಗಿದ್ದು, ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ರೋಡ್ ಶೋ ನಡೆದಿದೆ.
ರಸ್ತೆಯ ಇಕ್ಕೆಲಗಳಲ್ಲಿ ನೆರೆದಿರುವ ಜನರು ಮೋದಿ ಮೋದಿ ಎಂದು ಜಯಘೋಷಗಳನ್ನು ಕೂಗಿ ಪ್ರಧಾನಿ ಮೇಲೆ ಹೂಮಳೆಗರೆದು ಸ್ವಾಗತಿಸಿದ್ದಾರೆ. ದೇವರ ದರ್ಶನ ಪಡೆದ ನಂತರ ಅವರು ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗಿಯಾಗಿದ್ದಾರೆ.ಬಳಿಕ ಸಭಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ಜೈ ಶ್ರೀ ಕೃಷ್ಣ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿ ಜನರನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ.
ಶ್ರೀ ಕೃಷ್ಣ ಮಠಕ್ಕೆ ಆಗಮಿಸಿದ ಪ್ರಧಾನಿ ಮೋದಿ ಶ್ರೀ ಕೃಷ್ಣನ ದರ್ಶನ ಪಡೆದಿದ್ದಾರೆ. ನಂತರ ಸ್ವರ್ಣ ಲೇಪಿತ ಕನಕನ ಕಿಂಡಿ ಲೋಕಾರ್ಪಣೆಗೊಳಿಸಿದ್ದಾರೆ. ಬರೋಬ್ಬರಿ 2 ಕೋಟಿ ರೂ ವೆಚ್ಚದಲ್ಲಿ ಸ್ವರ್ಣ ಲೇಪಿತ ಕನಕನ ಕಿಂಡಿಯನ್ನ ನಿರ್ಮಿಸಲಾಗಿದೆ.ಉಡುಪಿಯ ಕೃಷ್ಣ ಮಂಟಪದಲ್ಲಿ ಕನಕನ ಕಿಂಡಿಗೆ ಚಿನ್ನದ ಹೊದಿಕೆ ಸಮರ್ಪಿಸಿ ಸುವರ್ಣ ತೀರ್ಥ ಮಂಟಪ ಉದ್ಘಾಟಿಸಿದ್ದಾರೆ.
































