ಪ್ರಯಾಗ್ ರಾಜ್:ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿನ ಮಹಾಕುಂಭ ಮೇಳವನ್ನು ಪ್ರಧಾನಿ ನರೇಂದ್ರ ಮೋದಿ ‘ಏಕತೆಯ ಮಹಾಯಜ್ಞ’ ಎಂದು ವರ್ಣಿಸಿದ್ದಾರೆ. ಇದೇ ವೇಳೆ, ದೇಶದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ಪ್ರತಿಬಿಂಬವಾಗಿ ಮಹಾಕುಂಭವನ್ನು ಪರಿಗಣಿಸಿದ ಅವರು, 140 ಕೋಟಿ ಭಾರತೀಯರ ಭಕ್ತಿ ಮತ್ತು ಭಾಗವಹಿಸುವಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
45 ದಿನಗಳ ಕಾಲ ನಡೆಯುವ ಈ ಮಹಾಕುಂಭವು, ಭಾರತದಲ್ಲಿ ಸಮಾಜದ ಪ್ರತಿಯೊಬ್ಬ ವರ್ಗದ ಜನರು ನಂಬಿಕೆ ಎಂದು ಅವರು ಹೇಳಿದರು. ಮಹಾಕುಂಭವು ‘ಏಕ ಭಾರತ, ಶ್ರೇಷ್ಠ ಭಾರತ’ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಸಹಾಯವಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟರು.
ಈ ಅವಿಸ್ಮರಣೀಯ ಏಕತೆಯ ದೃಶ್ಯವು ಕೋಟಿ ಕೋಟಿ ಭಾರತೀಯರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮಹಾಕುಂಭ ಮೇಳದ ನಂತರ, ಪ್ರಧಾನಿ ಮೋದಿ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾದ ಸೋಮನಾಥಕ್ಕೆ ಅವರು ಪ್ರಾರ್ಥನೆ ಸಲ್ಲಿಸಲಿದ್ದಾರೆ.