ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಗುರು ಗೋವಿಂದ್ ಸಿಂಗ್ ಜಯಂತಿಯ ಶುಭ ಹಾರೈಸಿದರು. ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಶುಭ ಹಾರೈಸಿ ಸಂದೇಶ ಸಾರಿದ್ದಾರೆ.
ನಾನು ಶ್ರೀ ಗುರು ಗೋವಿಂದ್ ಸಿಂಗ್ ಜೀ ಅವರ ಜಯಂತಿಯ ಶುಭ ಸಂಧರ್ಭದಲ್ಲಿ ಅವರಿಗೆ ನಮಸ್ಕರಿಸುತ್ತೇನೆ. ಅವರ ಚಿಂತನೆಗಳು ಪ್ರಗತಿಪರ, ಸಮೃದ್ಧ ಮತ್ತು ಸಹಾನುಭೂತಿಯ ಸಮಾಜವನ್ನು ನಿರ್ಮಿಸಲು ನಮಗೆ ಸ್ಫೂರ್ತಿ ನೀಡುತ್ತವೆ. ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದು ಶುಭಾಶಯ ತಿಳಿಸಿದ್ದಾರೆ.
10 ನೇ ಸಿಖ್‌ಗುರು, ಗುರು ಗೋಬಿಂದ್ ಸಿಂಗ್ ಅವರು ಜಗತ್ತಿಗೆ ಖಾಲ್ಸಾ ಪಂಥವನ್ನು ನೀಡಿದರು. ಮತ್ತು ಅವರು ನೈತಿಕತೆಗೆ ಹೆಸರುವಾಸಿಯಾಗಿದ್ದಾರೆ.