ಪ್ರಯಾಗ್ರಾಜ್ : ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಪ್ರಯಾಗ್ರಾಜ್ನ ಸಂಗಮದಲ್ಲಿ ಮಹಾ ಕುಂಭ ಮೇಳದಲ್ಲಿ ಪಾಲ್ಗೊಳ್ಳಲು ದೋಣಿ ವಿಹಾರ ಕೈಗೊಂಡರು. ಉತ್ಸವದಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತರಿಗೆ ಮೋದಿ ಅವರು ಕೈ ಬೀಸಿ ಆತ್ಮೀಯ ಸಂಭ್ರಮವನ್ನು ಹಂಚಿಕೊಂಡರು.
ಜನವರಿ 13ರಂದು ಪ್ರಾರಂಭವಾದ ಮಹಾಕುಂಭವು ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಆಚರಣೆಯಾಗಿದ್ದು, ಫೆಬ್ರವರಿ 26, 2025 ರವರೆಗೆ ಮುಂದುವರಿಯಲಿದೆ. ಈ ಉತ್ಸವದಲ್ಲಿ ಪ್ರಪಂಚದಾದ್ಯಾಂತ ಲಕ್ಷಾಂತರ ಭಕ್ತರು ಭಾಗವಹಿಸಿ, ಧಾರ್ಮಿಕ ಆಚರಣೆಗಳು, ಪ್ರಾರ್ಥನೆಗಳು ಮತ್ತು ಪ್ರವಚನಗಳಲ್ಲಿ ಭಾಗವಹಿಸುತ್ತಿದ್ದಾರೆ.
ಇತ್ತೀಚೆಗೆ, ಫೆಬ್ರವರಿ 1ರಂದು, 77 ದೇಶಗಳಿಂದ 118 ಸದಸ್ಯರ ನಿಯೋಗವು ಪವಿತ್ರ ಸ್ನಾನದಲ್ಲಿ ಪಾಲ್ಗೊಂಡಿತ್ತು. ಈ ದೇಶಗಳಲ್ಲಿ ರಷ್ಯಾ, ಮಲೇಷ್ಯಾ, ಬೊಲಿವಿಯಾ, ಜಿಂಬಾಬ್ವೆ, ಉಕ್ರೇನ್, ಇಟಲಿ, ಅಮೆರಿಕ, ಸ್ವೀಡನ್, ಇತ್ಯಾದಿ ರಾಷ್ಟ್ರಗಳ ರಾಜತಾಂತ್ರಿಕರು ಮತ್ತು ಅವರ ಕುಟುಂಬಗಳು ಸೇರಿದ್ದರು. ಮಹಾಕುಂಭ ಮೇಳದಲ್ಲಿ ದೇಶ-ವಿದೇಶದ ನೂತನ ಸಂಪರ್ಕಗಳನ್ನು ಹೇರುವ ಮೂಲಕ ಪವಿತ್ರತೆಯ ಹಾಗೂ ಧಾರ್ಮಿಕ ಸಂಪ್ರದಾಯಗಳ ಪ್ರಸಾರಕ್ಕೆ ಉತ್ತೇಜನ ಸಿಕ್ಕಿದಂತಾಗಿದೆ.