ನವದೆಹಲಿ: ಬಿಹಾರದಲ್ಲಿ ಶಿಕ್ಷಣ ಪದ್ಧತಿ ವಿನಾಶಕಾರಿಯಾಗಲು ಕಾಂಗ್ರೆಸ್ ಮತ್ತು RJD ಪಕ್ಷಗಳೇ ಕಾರಣ. ಇದರಿಂದಾಗಿಯೇ ಇಲ್ಲಿನ ಜನತೆ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಮತ್ತು RJD ಆಡಳಿತದಲ್ಲಿ ಬಿಹಾರದಲ್ಲಿ ಶಾಲೆಗಳನ್ನು ತೆರೆಯಲಾಗಿಲ್ಲ. ಜೊತೆಗೆ ಯಾವುದೇ ನೇಮಕಾತಿ ಪ್ರಕ್ರಿಯೆಗಳು ನಡೆದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎರಡೂವರೆ ದಶಕಗಳ ಹಿಂದೆ ಬಿಹಾರದಲ್ಲಿ ಶಿಕ್ಷಣದ ಗುಣಮಟ್ಟ ಹೇಗಿತ್ತು ಎನ್ನುವುದರ ಅರಿವು ಈ ಪೀಳಿಗೆಗೆ ಇಲ್ಲದೇ ಇರಬಹುದು. ನೇಮಕಾತಿಗಳು ನಡೆಯುತ್ತಿರಲಿಲ್ಲ. ಶಾಲೆಗಳನ್ನು ತೆರೆಯಲಾಗುತ್ತಿರಲಿಲ್ಲ. ಇಲ್ಲಿ ತಮ್ಮ ಮಗು ಅಧ್ಯಯನ ನಡೆಸಿ ಬೆಳವಣಿಗೆಯಾಗಬೇಕು ಎಂದು ಯಾವ ಪೋಷಕರು ಸಹ ಬಯಸುವುದಿಲ್ಲ. ಬಲವಂತದಿಂದ ಇಲ್ಲಿನ ಲಕ್ಷಾಂತರ ಮಕ್ಕಳು ಶಿಕ್ಷಣಕ್ಕಾಗಿ ಬೇರೆ ಬೇರೆ ಕಡೆಗಳಿಗೆ ವಲಸೆ ಹೋಗಬೇಕಾಗಿ ಬಂತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.