ನವದೆಹಲಿ : ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಪಾಕಿಸ್ತಾನದ ವಿರುದ್ಧ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಳಿಕ ಮೋದಿ ಇಲ್ಲಿಯವರೆಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿರಲಿಲ್ಲ.
ಹೀಗಾಗಿ ಇಂದು ಏನು ಹೇಳುತ್ತಾರೆ ಎಂಬ ಕುತೂಹಲ ಮೂಡಿಸಿದೆ.ಇಂದು ಸಂಜೆ ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ಜೊತೆ ಸಭೆ ನಡೆಯಲಿದೆ. ಕದನ ವಿರಾಮ ಘೋಷಣೆಯಾದ ನಂತರ ಎರಡು ದೇಶಗಳ ಡಿಜಿಎಂಒಗಳು ಇಂದು ಮೊದಲ ಬಾರಿಗೆ ಮಾತನಾಡಲಿದ್ದಾರೆ. ಪೂರ್ವ ನಿಗದಿ ಪ್ರಕಾರ ಇಂದು ಮಧ್ಯಾಹ್ನ ಡಿಜಿಎಂಒ ಸಭೆ ನಡೆಯಬೇಕಿತ್ತು. ಆದರೆ ಈ ಸಭೆ ಇಂದು ಸಂಜೆಗೆ ಮುಂದೂಡಿಕೆಯಾಗಿದೆ.