ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 3 ರಿಂದ 4 ರವರೆಗೆ ಬ್ಯಾಂಕಾಕ್ಗೆ ಭೇಟಿ ನೀಡಲಿದ್ದು, ಈ ಬಾರಿ ಬಿಮ್ಸ್ಟೆಕ್ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಥೈಲ್ಯಾಂಡ್ ಆಯೋಜಿಸಿರುವ 6ನೇ ಬಿಮ್ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.ಪ್ರಧಾನಿ ಮೋದಿ ಥೈಲ್ಯಾಂಡ್ ಭೇಟಿಯ ನಂತರ ಏಪ್ರಿಲ್ 4 ರಿಂದ 6 ರವರೆಗೆ ಶ್ರೀಲಂಕಾಗೆ ಭೇಟಿ ನೀಡಲಿದ್ದಾರೆ.
“ಥೈಲ್ಯಾಂಡ್ ಪ್ರಧಾನಿ ಪೇಟೊಂಗ್ಟಾರ್ನ್ ಶಿನವಾತ್ರ ಅವರ ಆಹ್ವಾನದ ಮೇರೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 3 ರಿಂದ 4 ರವರೆಗೆ ಬ್ಯಾಂಕಾಕ್ಗೆ ಭೇಟಿ ನೀಡಲಿದ್ದಾರೆ. ಈ ಬಾರಿ ಥೈಲ್ಯಾಂಡ್ ಆಯೋಜಿಸಿರುವ 6ನೇ ಬಿಮ್ಸ್ಟೆಕ್ ಶೃಂಗಸಭೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ(ಎಂಇಎ) ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಧಾನಿ ಮೋದಿ ಅವರು ಮೂರನೇ ಬಾರಿ ಥೈಲ್ಯಾಂಡ್ಗೆ ಭೇಟಿ ನೀಡುತ್ತಿದ್ದು, ದ್ವೀಪ ರಾಷ್ಟ್ರದ ಉನ್ನತ ನಾಯಕರೊಂದಿಗೆ ಮಾತು ಕತೆ ನಡೆಸಲಿದ್ದಾರೆ.
ಪ್ರಧಾನಿ ಮೋದಿ ಅವರು ಏಪ್ರಿಲ್ 3, 2025 ರಂದು ಥೈಲ್ಯಾಂಡ್ ಪ್ರಧಾನಿಯೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ, ಎರಡೂ ದೇಶಗಳ ನಾಯಕರು ದ್ವಿಪಕ್ಷೀಯ ಸಹಕಾರವನ್ನು ಪರಿಶೀಲಿಸುವ ಮತ್ತು ದೇಶಗಳ ನಡುವಿನ ಭವಿಷ್ಯದ ಪಾಲುದಾರಿಕೆಗೆ ದಾರಿ ಮಾಡಿಕೊಡುವ ಬಗ್ಗೆ ಮಾತನಾಡಲಿದ್ದಾರೆ. ಭಾರತ ಮತ್ತು ಥೈಲ್ಯಾಂಡ್ ಸಮುದ್ರ ಗಡಿಯನ್ನು ಹಂಚಿಕೊಂಡಿವೆ ಮತ್ತು ಎರಡೂ ದೇಶಗಳ ನಡುವೆ ಸಾಂಸ್ಕೃತಿಕ, ಭಾಷಾ ಮತ್ತು ಧಾರ್ಮಿಕ ಸಂಬಂಧಗಳಿವೆ.
2018 ರಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ನಡೆದ ನಾಲ್ಕನೇ BIMSTEC ಶೃಂಗಸಭೆಯ ನಂತರ BIMSTEC ದೇಶಗಳ ಈ ಭೌತಿಕ ಸಭೆ ನಡೆಯುತ್ತಿದೆ. ಐದನೇ ಶೃಂಗಸಭೆಯು ಮಾರ್ಚ್ 2022 ರಲ್ಲಿ ಶ್ರೀಲಂಕಾದ ಕೊಲಂಬೊದಲ್ಲಿ ವರ್ಚುವಲ್ ಆಗಿ ನಡೆಯಿತು. ಪ್ರಾದೇಶಿಕ ಸಹಕಾರ ಮತ್ತು ಪಾಲುದಾರಿಕೆಯನ್ನು ಬಲಪಡಿಸಲು ಭಾರತವು BIMSTEC ನಲ್ಲಿ ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.