ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ನ.28ರಂದು ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಭೇಟಿಯನ್ನು ಉನ್ನತ ಮೂಲಗಳು ಖಚಿತಪಡಿಸಿವೆ. ಕಾರಣಾಂತರಗಳಿಂದ ಪ್ರಧಾನಿಗಳ ರೋಡ್ ಶೋ ಕಾರ್ಯಕ್ರಮ ರದ್ದುಗೊಂಡಿದೆ.
ಪ್ರಧಾನಿ ಆಗಮಿಸುವ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ:ಪ್ರಧಾನಿ ಮೋದಿ ಅಂದು ಬೆಳಿಗ್ಗೆ ದೆಹಲಿಯ ಏರ್ ಪೋರ್ಟ್ ನಿಂದ ಹೊರಡಲಿದ್ದಾರೆ. ಬೆಳಿಗ್ಗೆ 11.10ಕ್ಕೆ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಬೆಳಿಗ್ಗೆ 11.35ಕ್ಕೆ ಉಡುಪಿಯ ಆದಿಉಡುಪಿ ಹೆಲಿಪ್ಯಾಡ್ಗೆ ಆಗಮಿಸಲಿದ್ದಾರೆ. ಬಳಿಕ ಪ್ರಧಾನಿ ಅವರು ರಸ್ತೆ ಮಾರ್ಗದ ಮೂಲಕ ಮಧ್ಯಾಹ್ನ 12ಗಂಟೆಗೆ ಉಡುಪಿ ಕೃಷ್ಣಮಠಕ್ಕೆ ಬರಲಿದ್ದಾರೆ. ದೇವರ ದರ್ಶನ ಮಾಡಲಿದ್ದಾರೆ. ಆ ನಂತರ ರಾಜಾಂಗಣ ಪಾರ್ಕಿಂಗ್ ಬಳಿ ಹಾಕಿರುವ ಬೃಹತ್ ವೇದಿಕೆಯಲ್ಲಿ ಜರುಗಲಿರುವ ಲಕ್ಷಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 1.40ಕ್ಕೆ ಆದಿಉಡುಪಿ ಹೆಲಿಪ್ಯಾಡ್ ಮೂಲಕ ನಿರ್ಗಮಿಸಲಿದ್ದಾರೆ.































