ಹಲವು ವರ್ಷಗಳಿಂದ ರಕ್ಷಾ ಬಂಧನದ ದಿನ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಖಿ ಕಟ್ಟುವ ಸಂಪ್ರದಾಯವನ್ನು ಪಾಕಿಸ್ತಾನದ ಅಮರ್ ಮೊಹ್ಸಿನ್ ಶೇಖ್ ಮುಂದುವರೆಸಿಕೊಂಡು ಬಂದಿದ್ದಾರೆ.
ಈ ವರ್ಷವೂ ಅವರು ಎರಡು ರಾಖಿಗಳನ್ನು ಕೈಯಲ್ಲಿ ತಯಾರಿಸಿ ಪ್ರಧಾನಿ ಕಚೇರಿಯಿಂದ ಬರುವ ಆಹ್ವಾನಕ್ಕಾಗಿ ಕಾಯುತ್ತಿದ್ದಾರೆ.
ಈ ಬಗ್ಗೆ ಮಂಗಳವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು ನಾನು ಎಂದಿಗೂ ಮಾರುಕಟ್ಟೆಯಿಂದ ರಾಖಿಗಳನ್ನು ಖರೀದಿಸುವುದಿಲ್ಲ, ಬದಲಿಗೆ, ಪ್ರತಿ ವರ್ಷ ಅವುಗಳನ್ನು
ಮನೆಯಲ್ಲಿ ಕೈಯಿಂದ ತಯಾರಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಟ್ಟುತ್ತೇನೆ ಎಂದಿದ್ದಾರೆ.