ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯಲ್ಲಿ ಅಸಘಟಿತ ಕೂಲಿ ಕಾರ್ಮಿಕರು ವಯೋವೃದ್ಧರಾದಾಗ ಮಾಸಿಕ ಪಿಂಚಣಿ ಪಡೆಯಬಹುದಾಗಿದ್ದು, ಈ ಯೋಜನೆಯ ವಿವರ, ಅರ್ಹತೆ, ಅರ್ಜಿ ವಿವರ ಈ ಕೆಳಗೆ ನೀಡಲಾಗಿದೆ.
PM-SYM ಯೋಜನೆಯ ಉದ್ದೇಶ
ಈ ಯೋಜನೆಯು ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರ ಹಿತದೃಷ್ಟಿಯಿಂದ ಜಾರಿಗೊಳಿಸಿದ್ದು, ಬೀದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಮನೆ ಕೆಲಸದವರು, ಕೃಷಿ ಕಾರ್ಮಿಕರು, ಚರ್ಮೋದ್ಯಮ ಈ ರೀತಿಯಾಗಿ ಯಾವುದೇ ಭದ್ರತೆ ಇಲ್ಲದ ಕೆಲಸಗಳಲ್ಲಿ ತೊಡಗಿಸಿಕೊಂಡ ಕಾರ್ಮಿಕರು ಮುಂದೆ ತಮ್ಮ ನಿವೃತ್ತಿ ಜೀವನದಲ್ಲಿ ಪಿಂಚಣಿ ಪಡೆಯಲು ಕಡಿಮೆ ಪ್ರೀಮಿಯಂ ಪಾವತಿಯಲ್ಲಿ ಈ ಯೋಜನೆ ಮಾಡಬಹುದಾಗಿದೆ.
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ ಗೆ ಅರ್ಹತೆಗಳು
- 18 ರಿಂದ 40 ವರ್ಷದ ಅಸಂಘಟಿತ ಕಾರ್ಮಿಕರು
- ಆದಾಯ ತೆರಿಗೆ ( income tax) ಪಾವತಿದಾರು ಯೋಜನೆಗೆ ಅರ್ಹರಲ್ಲ
- ಕಾರ್ಮಿಕನ ಮಾಸಿಕ ಆದಾಯ 15000 ರೂ. ಒಳಗಿರಬೇಕು
- ಸಂಘಟಿತ ವಲಯದ ಕಾರ್ಮಿಕರಾಗಿರಬಾರದು
- ESI, PF ಇರುವ ಕಾರ್ಮಿಕರು ಈ ಯೋಜನೆಗೆ ಅರ್ಹರಲ್ಲ
PMSYM ಯೋಜನೆಯ ಸೌಲಭ್ಯಗಳು
- ಈ ಯೋಜನೆಯಲ್ಲಿ ಕಾರ್ಮಿಕರು 60 ವರ್ಷವಾದ ಬಳಿಕ ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿ ಪಡೆಯಬಹುದಾಗಿದೆ.
- ಈ ಯೋಜನೆಯಲ್ಲಿ ನಾವು ಪಾವತಿಯ ಪ್ರೀಮಿಯಂ ಮೊತ್ತದಷ್ಟೇ ಕೇಂದ್ರ ಸರ್ಕಾರದಿಂದ ಹಣ ಈ ಖಾತೆಗೆ ಬರುತ್ತದೆ
- ಪಿಂಚಣಿ ಆರಂಭವಾದ ನಂತರ ಮೃತಪಟ್ಟರೆ ಅವರ ಪತಿ/ಪತ್ನಿಗೆ ಪಿಂಚಣಿ 50% ಬರುತ್ತದೆ
- ಯೋಜನೆಯಲ್ಲಿ ಪ್ರತಿ ತಿಂಗಳು ಪ್ರೀಮಿಯಂ ಪಾವತಿಸುತ್ತಿರುವಾಗಲೇ ಮೃತ ಪಟ್ಟಲ್ಲಿ ಅವರ ಪತಿ/ಪತ್ನಿ ಇದೇ ಯೋಜನೆಯನ್ನು ಅವರ ಹೆಸರಲ್ಲಿ ಮುಂದುವರೆಸಬಹುದು
ಶುಲ್ಕ ಕಂತು (Monthly Premium) ಪಾವತಿಯ ವಿವರ
- ಈ ಯೋಜನೆಯಲ್ಲಿ ನಿಮ್ಮ ವಯಸ್ಸಿನ ಆಧಾರದಲ್ಲಿ ಮಾಸಿಕ ಕಂತು ಪಾವತಿಸಬೇಕಾಗುತ್ತದೆ.
- ಇದರಲ್ಲಿ ನೀವು ಪ್ರತೀ ತಿಂಗಳು ಹಣ ಪಾವತಿಸಬೇಕು ಹಾಗೂ 60 ವರ್ಷದ ನಂತರ ನಿಮಗೆ ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿ ದೊರೆಯುತ್ತದೆ.
- ಈ ಯೋಜನೆಗೆ ಅರ್ಜಿ ಸಲ್ಲಿಸುವಾಗ ನಿಮ್ಮ ವಯಸ್ಸು 18 ಆಗಿದ್ದರೆ ನೀವು ಪ್ರತೀ ತಿಂಗಳು 55 ರೂಪಾಯಿ ಪಾವತಿಸಬೇಕು, ಇನ್ನು 55 ರೂಪಾಯಿ ಕೇಂದ್ರ ಸರ್ಕಾರದಿಂದ ಈ ಯೋಜನೆಗೆ ಪಾವತಿಯಾಗುತ್ತದೆ ಅಂದರೆ ಈ ಯೋಜನೆಗೆ ಒಟ್ಟು 110 ರೂಪಾಯಿ ಪ್ರತಿ ತಿಂಗಳು ಪಾವತಿಯಾಗುತ್ತದೆ.
- ಇದೇ ರೀತಿ ನೀವು 30 ವರ್ಷ ವಯಸ್ಸಿನವರಾದರೆ 105ರೂ, 35 ವರ್ಷ ವಯಸ್ಸಿನವರಾದರೆ 150 ರೂ., 40 ವರ್ಷದವರಾದರೆ 200 ರೂಪಾಯಿಯನ್ನು ಪ್ರತಿ ತಿಂಗಳು ಪಾವತಿಸಬೇಕು ಹಾಗೂ ಕೇಂದ್ರ ಸರ್ಕಾರದಿಂದ ಇಷ್ಟೇ ಹಣ ನಿಮ್ಮ ಈ ಯೋಜನೆಗೆ ಹಣ ಸಂದಾಯವಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ ಹೇಗೆ?
ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾದ ಫಲಾನುಭವಿಗಳು ನಿಮ್ಮ ಹತ್ತಿರದ CSC ಗ್ರಾಹಕ ಸೇವಾ ಕೇಂದ್ರ ಗಳಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ, ಮೊಬೈಲ್ ಜೊತೆಗೆ ತೆಗೆದುಕೊಂಡು ಹೋಗಿ, ಅರ್ಜಿ ನೋಂದಾವಣೆ ನಂತರ ನಿಮಗೆ PM-SYM ಕಾರ್ಡ್ ದೊರೆಯುತ್ತದೆ, ಹಾಗೂ ನಿಮ್ಮ ಪಿಂಚಣಿ ಸಂಖ್ಯೆ ದೊರೆಯುತ್ತದೆ, ಪ್ರಥಮ ಕಂತು ಪಾವತಿಸಬೇಕು ಹಾಗೂ ಮುಂದಿನ ಪ್ರೀಮಿಯಂ ಹಣ ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುತ್ತದೆ
ಹೆಚ್ಚಿನ ವಿವರಗಳಿಗಾಗಿ https://labour.gov.in/pm-sym ಗೆ ಭೇಟಿ ನೀಡಿ ವಿವರ ಪಡೆಯಬಹುದಾಗಿದೆ.