ಮಹಾರಾಷ್ಟ್ರ : ಪ್ರಿಯಂವದಾ ಅಶೋಕ್ ಮದ್ದಲ್ಕರ್, ಮಹಾರಾಷ್ಟ್ರದ ರತ್ನಗಿರಿ ಮೂಲದ ಐಎಎಸ್ ಆಫೀಸರ್. ಇವರು 2023 ನೇ ಸಾಲಿನ ಸಿಎಸ್‌ಇ ಪರೀಕ್ಷೆ ಮೂಲಕ 13ನೇ ರ್‍ಯಾಂಕ್ ನೊಂದಿಗೆ ಯಶಸ್ಸು ಗಳಿಸಿದವರು. ತಮ್ಮ 31ನೇ ವಯಸ್ಸಿನಲ್ಲಿ ಯುಪಿಎಸ್‌ಸಿ ಗೆಲ್ಲುವ ಕನಸನ್ನು ನನಸು ಮಾಡಿಕೊಂಡಿವರು. ಅವರ ಸಕ್ಸಸ್ ಜರ್ನಿ ಇಲ್ಲಿದೆ.
ಪ್ರಿಯಂವದಾ ಮೊದಲಿಗೆ ಐಐಎಂ ಬೆಂಗಳೂರಿಗೆ ಸೇರಿ ಬಿ.ಟೆಕ್ ಇನ್ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಮತ್ತು ನಂತರದಲ್ಲಿ ಎಂಬಿಎ ಪದವಿ ಪಡೆದರು. ಬರೋಬರಿ 6 ವರ್ಷಗಳ ಕಾಲ ಬ್ಯುಸಿನೆಸ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವ ಪಡೆದರು. ಆದರೆ ಕೊನೆಗೆ ಅವರ ಆಯ್ಕೆ ಬೇರೆಯೇ ಆಗಿತ್ತು. ಕೊನೆಗೆ ಸೇರಿದ್ದು ಅವರು ಸಾರ್ವಜನಿಕ ಸೇವೆಗೆ. ಅದು ಸಹ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡುವ ಮೂಲಕ ಭಾರತೀಯ ಆಡಳಿತ ಸೇವೆಗೆ.
ಪ್ರಿಯಂವದಾ ತಮ್ಮ ಯುಪಿಎಸ್‌ಸಿ ಐಎಎಸ್ ಕನಸನ್ನು ನನಸು ಮಾಡಿಕೊಳ್ಳುವ ದೃಷ್ಟಿಯಿಂದ 2020 ರ ಜುಲೈ ತಿಂಗಳಲ್ಲಿ ಕಾರ್ಪೋರೇಟ್ ಜಾಬ್ ಗೆ ವಿದಾಯ ಹೇಳಿದರು. ಇದರ ಜತೆಗೆ ಸ್ವಯಂ ಅಧ್ಯಯನ ಮಾಡಿಕೊಳ್ಳುವುದರೊಂದಿಗೆ ಯುಪಿಎಸ್‌ಸಿ ಗೆಲ್ಲಲು ಸಿದ್ಧರಾದರು . 2023 ನೇ ಸಾಲಿನ ಸಿಎಸ್‌ಇ ಪರೀಕ್ಷೆ ಮೂಲಕ 13ನೇ ರ್‍ಯಾಂಕ್ ನೊಂದಿಗೆ ಯಶಸ್ಸು ಕಂಡರು.