ಲಾಸ್ ಏಂಜಲೀಸ್ : 97ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಅಮೆರಿಕದ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದಿದೆ. ಈ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಲವಾರು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆದರೆ ಈ ಬಾರಿ ಭಾರತದ ಯಾವುದೇ ಸಿನಿಮಾಗಳು ಆಸ್ಕರ್ ಅವಾರ್ಡ್ ಗೆದ್ದಿಲ್ಲ ಎಂಬುದು ಬೇಸರದ ಸಂಗತಿ.
ಪ್ರಿಯಾಂಕಾ ಚೋಪ್ರಾ ನಿರ್ಮಾಣದ ‘ಅನುಜಾ’ ಶಾರ್ಟ್ ಫಿಲ್ಮ್ ಬೆಸ್ಟ್ ಲೈವ್ ಆ್ಯಕ್ಷನ್ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ನಾಮಿನೇಟ್ ಆಗಿತ್ತು. ಆದರೆ ‘ಅನುಜಾ’ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿಲ್ಲ. ಇದರೊಂದಿಗೆ ‘ಅನುಜಾ’ ಆಸ್ಕರ್ ಗೆಲ್ಲೋ ಕನಸು ಭಗ್ನವಾಗಿದೆ.
‘ಅನುಜಾ’ ಒಂದು ವಿಶೇಷವಾದ ಚಿತ್ರವಾಗಿದೆ. ಈ ಚಿತ್ರವು ಅನುಜಾ ಅನ್ನೋ 9 ವರ್ಷದ ಹುಡುಗಿಯ ಕಥೆಯಾಗಿದೆ. ಈ ಕಥೆಯಲ್ಲಿ ದೆಹಲಿ ಗಾರ್ಮೆಂಟ್ ಫ್ಯಾಕ್ಟರಿಯ ಚಿತ್ರವೂ ಇದೆ. ಅನುಜಾಳ ಬದುಕಿನ ಸತ್ಯವೂ ಇದೆ. ಕುಟುಂಬದ ಜವಾಬ್ದಾರಿ ಹೊತ್ತ ಒಬ್ಬ ಹೆಣ್ಣುಮಗಳ ಜೀವನ ಎಷ್ಟು ಕಠಿಣ, ಸವಾಲಿನ ಹಾದಿ ಆಗಿರುತ್ತದೆ ಎಂಬುದನ್ನು ಅನುಜಾ ಮೂಲಕ ತೆರೆ ಮೇಲೆ ತೋರಿಸಲಾಗಿದೆ.
‘ಅನುಜಾ’ ಲೈವ್ ಆ್ಯಕ್ಷನ್ ಶಾರ್ಟ್ ಚಿತ್ರವಾಗಿದ್ದು, ಇದಕ್ಕೆ ಆ್ಯಡಮ್ ಜೆ. ಗ್ರಾವೆಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹಾಗೂ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ನಿರ್ಮಾಣ ಮಾಡಿದ್ದಾರೆ.