ದೆಹಲಿ : ಪ್ರತಿ ವರ್ಷವೂ ಸಾಕಷ್ಟು ಅಭ್ಯರ್ಥಿಗಳು ಯುಪಿಎಸ್ ಸಿ ಪರೀಕ್ಷೆಯನ್ನು ಬರೆಯುತ್ತಾರೆ. ಇವರಲ್ಲಿ ಕೆಲವರು ಮಾತ್ರ ಒಂದೇ ಬಾರಿಗೆ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. ಆದರೆ ಕೆಲವರು ಅನೇಕ ಪ್ರಯತ್ನಗಳ ನಂತರ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. ಹೀಗೆ ಅನೇಕ ಪ್ರಯತ್ನಗಳ ನಂತರ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ಪ್ರಿಯಾಂಕಾ ಗೋಯೆಲ್ ಅವರ ಯಶೋಗಾಥೆ ಇದು.
ಪ್ರಿಯಾಂಕಾ ಗೋಯೆಲ್ ಅವರು ಮೂಲತಃ ದೆಹಲಿಯವರು. ದೆಹಲಿ ವಿಶ್ವವಿದ್ಯಾನಿಲಯದ ಕೇಶವ ಮಹಾವಿದ್ಯಾಲಯದಿಂದ ಬಿ.ಕಾಂ. ಪದವಿ ಪಡೆದ ಅವರು ನಂತರ ಯುಪಿಎಸ್ ಸಿ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಾರೆ.
ಪ್ರಿಯಾಂಕ ಅವರು ಯುಪಿಎಸ್ ಸಿ ಪರೀಕ್ಷೆಯಲ್ಲಿ ಸತತ ಐದು ಬಾರಿ ಉತ್ತೀರ್ಣರಾಗಲು ಸಾಧ್ಯವಾಗುವುದಿಲ್ಲ. ಆ ಬಳಿಕ 6ನೇ ಬಾರಿಗೆ 369ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ ಐಎಎಸ್ ಅಧಿಕಾರಿಯಾಗುತ್ತಾರೆ.