ನವದೆಹಲಿ : ಯುಪಿಎಸ್‌ಸಿ ಅಂತಹ ಕಠಿಣವಾದ ಪರೀಕ್ಷೆಯನ್ನು ತಮ್ಮ ಮೊದಲ ಪ್ರಯತ್ನದಲ್ಲಿ ಪಾಸ್ ಮಾಡಲು ಸಾಧ್ಯವಾಗದೆ ಇರುವವರು ಮತ್ತೊಂದು ಅಂತ ಅನೇಕ ಪ್ರಯತ್ನಗಳನ್ನು ತೆಗೆದುಕೊಳ್ಳುತ್ತಾರೆ. ಅದೇ ರೀತಿ 6ನೇ ಪ್ರಯತ್ನದಲ್ಲಿ ಅಂತಿಮವಾಗಿ ಪಾಸ್ ಮಾಡಿ ಐಎಎಸ್ ಅಧಿಕಾರಿಯಯಾದ ಪ್ರಿಯಾಂಕಾ ಗೋಯೆಲ್ ಕಥೆ ಇಲ್ಲಿದೆ.
ಐಎಎಸ್ ಅಧಿಕಾರಿ ಪ್ರಿಯಾಂಕಾ ಗೋಯೆಲ್ ಅವರು ಮೂಲತಃ ದೆಹಲಿಯವರು. ಅವರು ತಮ್ಮ ಅಂತಿಮ ಮತ್ತು 6ನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು 369ನೇ ರ್ಯಾಂಕ್ ಪಡೆಯುವುದರೊಂದಿಗೆ ಪಾಸ್ ಮಾಡಿದರು.
ಗೋಯೆಲ್ ಅವರು ದೆಹಲಿ ವಿಶ್ವವಿದ್ಯಾಲಯದ ಕೇಶವ್ ಮಹಾವಿದ್ಯಾಲಯದಿಂದ ಬಿಕಾಂ ಪದವಿ ಪಡೆದರು. ತಮ್ಮ ಪದವಿಯ ನಂತರ, ಗೋಯೆಲ್ ಅವರು ಐಎಎಸ್ ಪರೀಕ್ಷೆಗೆ ತಮ್ಮ ತಯಾರಿಯನ್ನು ಪ್ರಾರಂಭಿಸಿದರು. ತಮ್ಮ ಆರಂಭಿಕ ನಾಲ್ಕು ಪ್ರಯತ್ನಗಳಲ್ಲಿ, ಐಎಎಸ್ ಅಧಿಕಾರಿಯಾಗಿರುವ ಪ್ರಿಯಾಂಕಾ ಗೋಯೆಲ್ ಪ್ರಿಲಿಮ್ಸ್ ಕಟ್-ಆಫ್ ಅಂಕಗಳನ್ನು ಸಹ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲವಂತೆ.
ಆದರೆ, ಸತತ ವೈಫಲ್ಯಗಳು ಅವರ ಉತ್ಸಾಹ ಮತ್ತು ದೃಢತೆಯನ್ನು ಎಂದಿಗೂ ಕಡಿಮೆ ಮಾಡಲಿಲ್ಲ. ಅವರು ಈ ಪರೀಕ್ಷೆಗಾಗಿ ಅಧ್ಯಯನವನ್ನು ಹಾಗೆಯೇ ಮುಂದುವರೆಸಿದರು ಮತ್ತು ಅಂತಿಮವಾಗಿ 2023 ರಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸ್ ಮಾಡಿದರು.
ಐಎಎಸ್ ಅಧಿಕಾರಿಯಾಗಿರುವ ಪ್ರಿಯಾಂಕಾ ಗೋಯೆಲ್ ಅವರು ಸಾಮಾಜಿಕ ಮಾಧ್ಯಮದಲ್ಲಿಯು ಸಹ ಸಾಕಷ್ಟು ಸಕ್ರಿಯರಾಗಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಅವರು 192000 ಫಾಲೋವರ್‌ಗಳನ್ನು ಸಹ ಹೊಂದಿದ್ದಾರೆ.