ಚಿತ್ರದುರ್ಗ : ಪದವಿ ಜೊತೆ ಕೌಶಲ್ಯ ಶಿಕ್ಷಣ ಪಡೆದುಕೊಂಡಾಗ ಮಾತ್ರ ಸ್ವ-ಉದ್ಯೋಗಿಗಳಾಗಿ ಸ್ವಾವಲಂಭಿ ಜೀವನ ನಡೆಸಲು ಸಾಧ್ಯ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬಿಟ್ಸ್ ಹೈಟೆಕ್ ಕಾಲೇಜು ವತಿಯಿಂದ ತ.ರಾ.ಸು.ರಂಗಮಂದಿರದಲ್ಲಿ ಇತ್ತೀಚೆಗೆ ನಡೆದ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಿನ ವಿದ್ಯಾರ್ಥಿಗಳು ಕೇವಲ ಅಂಕಪಟ್ಟಿ ಪದವಿಗಷ್ಟೆ ಸೀಮಿತರಾಗಿದ್ದಾರೆ. ಕೌಶಲ್ಯ ಶಿಕ್ಷಣದ ಕಡೆ ಹೆಚ್ಚು ಗಮನ ಕೊಟ್ಟು ಸಾಫ್ಟ್ವೇರ್ ಕಂಪನಿಗಳನ್ನು ತೆರೆದು ಹತ್ತಾರು ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವಂತ ಸಾಮಥ್ರ್ಯ ಬೆಳೆಸಿಕೊಳ್ಳಬೇಕು. ಪದವಿ ನಂತರ ಎಲ್ಲರೂ ಸರ್ಕಾರಿ ನೌಕರಿಗೆ ಕಾಯುವ ಬದಲು ಸ್ವ-ಉದ್ಯೋಗ ಆರಂಭಿಸುವುದರ ಕಡೆ ಮನಸ್ಸು ಮಾಡಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅನೇಕ ಸವಲತ್ತುಗಳಿವೆ. ಎಲ್ಲವನ್ನು ಸದುಪಯೋಗಪಡಿಸಿಕೊಂಡು ಯಶಸ್ವಿ ಉದ್ಯಮಿಗಳಾಗಿ ಎಂದು ಪ್ರೊ.ಬಿ.ಡಿ.ಕುಂಬಾರ ಹಾರೈಸಿದರು.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ, ಅಪರಾಧಶಾಸ್ತ್ರ ವಿಶ್ರಾಂತ ಪ್ರಾಧ್ಯಾಪಕ ಡಾ.ನಟರಾಜ್, ಸರ್ಕಾರಿ ವಿಜ್ಞಾನ ಕಾಲೇಜು ಗಣಿತ ಸ್ನಾತಕೋತ್ತರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಗಟ್ಟಿ ಎನ್.ಬಿ. ಬಿಟ್ಸ್ ಹೈಟೆಕ್ ಕಾಲೇಜು ಸಂಸ್ಥಾಪಕ ರವೀಂದ್ರ ಕೆ.ಬಿ. ಪ್ರಾಂಶುಪಾಲರಾದ ಶ್ರೀಮತಿ ಕವಿತ ಜಿ.ಎಂ. ಕಾರ್ಯದರ್ಶಿ ಬಸಪ್ಪ ಕೆ.ಆರ್. ಇವರುಗಳು ವೇದಿಕೆಯಲ್ಲಿದ್ದರು.