ಕಷ್ಟ ಪಟ್ಟು ಓದದೇ ಇಷ್ಟಪಟ್ಟು ಓದಿದಾಗ ಮಾತ್ರ ಜೀವನ ಸಾರ್ಥಕ: ಪ್ರೋ. ಡಾ. ಸತೀಶ್ ಗೌಡ

WhatsApp
Telegram
Facebook
Twitter
LinkedIn

 

ಚಿತ್ರದುರ್ಗ : ಓದುವಾಗ ಕಷ್ಟ ಪಟ್ಟು ಓದದೇ ಇಷ್ಟಪಟ್ಟು ಓದಬೇಕು ಆಗ ಮಾತ್ರ ಜೀವನದಲ್ಲಿ ಪ್ರಗತಿಯನ್ನು ಹೊಂದಲು ಸಾಧ್ಯವಿದೆ, ಏನನ್ನಾದರೂ ಸಾಧನೆ ಮಾಡಲು ಅವಕಾಶ ಇದೆ ಪರೀಕ್ಷೆಯನ್ನು ಹಬ್ಬದ ರೀತಿಯಲ್ಲಿ ಆಚರಣೆಯನ್ನು ಮಾಡುವಂತೆ ತುಮಕೂರಿನ ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ಕುಲ ಸಚಿವರಾದ ಪ್ರೋ. ಡಾ. ಸತೀಶ್ ಗೌಡ ಎನ್ ಕಾನೂನು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ಸರಸ್ವತಿ ವಿದ್ಯಾ ಸಂಸ್ಥೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರಸ್ವತಿ ಕಾನೂನು ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ವಿದ್ಯಾರ್ಥಿ ಕಾನೂನು ವೇದಿಕೆ, ರಾಷ್ಟ್ರೀಯ ಸೇವಾ ಯೋಜನೆ, ಮಾನವ ಹಕ್ಕುಗಳ ವೇದಿಕೆ, ರೆಡ್ಕ್ರಾಸ್ಘಟಕ, ಇಕೋಕ್ಲಬ್ ಹಾಗೂ ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿ ಮಾತನಾಡಿದ ಅವರು, ಐದು ವರ್ಷಗಳ ಕಾಲ ನೀವುಗಳು ಸತತವಾಗಿ ಶ್ರಮವನ್ನು ಹಾಕಿ ಅಭ್ಯಾಸವನ್ನು ಮಾಡಿದರೆ ಮುಂದಿನ  50 ವರ್ಷಗಳ ಕಾಲ ಜನತೆಯಿಂದ ಗೌರವವನ್ನು ಸ್ವೀಕಾರ ಮಾಡಬಹುದಾಗಿದೆ. ವಿದ್ಯೆ ಮನುಷ್ಯನಿಗೆ ಬದುಕುವ ದಾರಿಯನ್ನು ತೋರಿಸುತ್ತದೆ. ಕಾನೂನು ಪದವಿಯನ್ನು ಪಡೆಯಲು ಆಯ್ಕೆ ಮಾಡಿದವರು ಹಣವನ್ನು ಮಾಡದೇ ಸೇವಾ ಮನೋಭಾವಯಿಂದ ಕೆಲಸವನ್ನು ಮಾಡಿದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯವಿದೆ ಎಂದರು.

ಹುಟ್ಟು-ಸಾವು ಸಾಮಾನ್ಯ ಅದು ಎಲ್ಲರ ಜೀವನದಲ್ಲಿಯೂ ನಡೆಯುತ್ತದೆ, ಇದರ ಮಧ್ಯದಲ್ಲಿ ಉತ್ತಮವಾದ ಸಾಧನೆಯನ್ನು ಮಾಡಬೇಕಿದೆ, ಆಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ. ನಿಮ್ಮಲ್ಲಿ ನೊಂದವಾರು, ನೋವನ್ನು, ಉಂಡವರು, ಬೇರೆಯವರಿಂದ ಮೋಸ ಹೋದವರು ಸೇರಿದಂತೆ ವಿವಿಧ ರೀತಿಯ ಜನರು ಬರುತ್ತಾರೆ ಅವರ ನೋವನ್ನು ಕೇಳಿಸಿಕೊಂಡು ಅವರಿಗೆ ನ್ಯಾಯವನ್ನು ಕೊಡಿಸುವ ಕಾರ್ಯವನ್ನು ಮಾಡುವಂತೆ ಭಾವು ನ್ಯಾಯಾವಾದಿಗಳಿಗೆ ಕರೆ ನೀಡಿ, ಇಂದು ನಮ್ಮ ದೇಶದಲ್ಲಿ ಸಾಧನೆಯನ್ನು ಮಾಡಿದವರೆಲ್ಲಾ ಬಡತನ, ಬದುಕಿನ ಕಷ್ಟಗಳನ್ನು ಕಂಡವರು, ಗ್ರಾಮಾಂತರ ಪ್ರದೇಶದಿಂದ ಬಂದವರಾ ಗಿದ್ದಾರೆ. ಬೆಂಗಳೂರಿನಲ್ಲಿ ಇದ್ದವರು ದೆಹಲಿಯಲ್ಲಿ ಇದ್ದಬವರು ಶ್ರೀಮಂತರ ಮಕ್ಕಳು ಸಾಧನೆಯನ್ನು ಮಾಡಿದವರನ್ನು ಕಂಡಿಲ್ಲ ನಮ್ಮ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಲ್ಲಿ ಕೀಳಿರಿಮೆ ಜಾಸ್ತಿ ಇದನ್ನು ಬಿಡಬೇಕು ನನಗೆ ಇಂಗ್ಲೀಷ್ ಬರುವುದಿಲ್ಲ, ಕೌಶಲ್ಯ ಇಲ್ಲ ಎಂಬುದನ್ನು ಬಿಡಬೇಕು ಕಲಿಯುವುದರ ಮೂಲಕ ತಮ್ಮ ವ್ಯಕ್ವಿತ್ತವನ್ನು ನಾವೇ ಸೃಷ್ಟಿ ಮಾಡಿಕೊಂಡಾಗ ಮಾತ್ರ ಸಮಾಜದಲ್ಲಿ ಗೌರವ ಸಿಗಲಿದೆ ಎಂದರು.

ಇಂದಿನ ದಿನಮಾನದಲ್ಲಿ ಹಣವನ್ನು ಹೊಂದಿದವನು ಶ್ರೀಮಂತನಲ್ಲ ಉತ್ತಮವಾದ ಆರೋಗ್ಯವನ್ನು ಹೊಂದಿವನು ಶ್ರೀಮಂತ ಆರೋಗ್ಯವನ್ನು ಚನ್ನಾಗಿ ಕಾಪಾಡಿಕೊಳ್ಳಬೇಕಿದೆ ಇದಕ್ಕಾಗಿ ಪ್ರತಿ ದಿನ ವ್ಯಾಯಾಮ, ಕಸರತ್ತು ಕ್ರೀಡೆಯಲ್ಲಿ ಭಾಗವಹಿಸುವಿಕೆಯನ್ನು ಮಾಡುವುದರ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ. ನಮ್ಮ ಜೀವನದಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಸಂವಿದಾನ ರಚನಾಕಾರರು, ರೈತ, ಸೈನಿಕ ಹಾಗೂ ಕಾರ್ಮೀಕರಿಗೆ ಗೌರವವನ್ನು ನೀಡಬೇಕಿದೆ, ಇದ್ದಲ್ಲದೆ ಮಹಿಳೆಯನ್ನು ಗೌರವಿಸಬೇಕಿದೆ ಇದು ಕುಟುಂಬದಿಂದಲೇ ಪ್ರಾರಂಭವಾಗಬೇಕಿದೆ. ಒಂದು ಕಟುಂಬದಲ್ಲಿ ಸಂಸ್ಕಾರ, ಸಂಸ್ಕøತಿ, ಮೌಲ್ಯಗಳನ್ನು ಬಿತ್ತಿದಾಗ ಯಾವುದೇ ರೀತಿಯಲ್ಲಿಯೂ ಸಹಾ ಅಪರಾಧಗಳು ನಡೆಯುವುದಿಲ್ಲ ಎಂದು ಪ್ರೋ. (ಡಾ.) ಸತೀಶ್ ಗೌಡ ಎನ್ ತಿಳಿಸಿದರು.

ಬೆಂಗಳೂರಿನ ವಿವೇಕಾನಂದ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಬಿ.ಕೇಂಪೇಗೌಡ ಮಾತನಾಡಿ, ನಾವುಗಳು ಟಿವಿಯನ್ನು ನೋಡುವುದನ್ನು ಬಿಟ್ಟು ಏನಾದರೂ ಸಾಧನೆಯನ್ನು ಮಾಡಿದಾಗ ನಾವು ಸಹಾ ಟಿ.ವಿ.ಯಲ್ಲಿ ಬರಲು ಸಾಧ್ಯವಾಗುತ್ತದೆ ಜನತೆ ನಮ್ಮನ್ನು ಸಹಾ ಟಿ.ವಿ.ಯಲ್ಲಿ ನೋಡಲು ಸಾಧ್ಯವಾಗುತ್ತದೆ ಇದು ಬಿಟ್ಟು ಸದಾ ಟಿವಿಯನ್ನು ನೋಡುತ್ತಾ ಕುಳಿತರೆ ಏನು ಆಗುವುದಿಲ್ಲ. ಎಲ್ಲರಲೂ ಸಹಾ ಏನಾದರೂ  ಒಂದು ಪ್ರತಿಭೆ ಇರುತ್ತದೆ ಆದನ್ನು ಹೊರ ತೆಗೆಯುವ ಕಾರ್ಯವನ್ನು ಶಿಕ್ಷಕನಾದವನು ಮಾಡಬೇಕಿದೆ. ಇಂದಿನ ನಮ್ಮ ಸಮಾಜದಲ್ಲಿ ವೈದ್ಯರು, ನ್ಯಾಯಾವಾದಿಗಳು, ಶಿಕ್ಷಕ ವೃತ್ತಿ ಪವಿತ್ರವಾಗಿದೆ, ಇವುಗಳಲ್ಲಿ ತೊಡಗಿಸಿಕೊಂಡವರು ಸದಾ ಜನತೆಯ ಏಳಿಗೆಯನ್ನು ಬಯಸುತ್ತಾರೆ. ನಿಮ್ಮದು ಹಣವನ್ನು ಮಾಡುವ ವೃತ್ತಿಯಲ್ಲ ಸಮಾಜ ಸೇವೆಯನ್ನು ಮಾಡುವ ವೃತ್ತಿಯಾಗಿದೆ ನೊಂದವರ ಕಣ್ಣೀರನ್ನು ಒರೆಸುವ ಕಾರ್ಯವನ್ನು ಮಾಡಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸರಸ್ವತಿ ವಿದ್ಯಾ ಸಂಸ್ಥೆಯ ಅಧ್ಯಕ್ಷರು, ರಾಜ್ಯ ಸಭಾದ ಮಾಜಿ ಸದಸ್ಯರಾದ ಹೆಚ್,ಹನುಮಂತಪ್ಪ, ಹಿರಿಯ ವಕೀಲರು ಸರಸ್ವತಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ಫಾತ್ಯಾರಾಜನ್, ಕಾರ್ಯದರ್ಶಿಗಳಾದ ಶ್ರೀಮತಿ ಡಿ.ಕೆ.ಶೀಲ ಆಡಳಿತ ಮಂಡಳಿ ಸದಸ್ಯರಾದ ರಾಮರಾವ್, ವಿದ್ಯಾರ್ಥಿ ಕಾನೂನು ವೇದಿಕೆಯ ಅಧ್ಯಕ್ಷರಾದ ಅಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶು ಪಾಲರಾದ ಪ್ರೋ.(ಡಾ.)ಎಂ.ಎಸ್. ಸುಧಾದೇವಿ ವಹಿಸಿದ್ದರು.

ಭೂಮಿಕ ಸಂಗಡಿವರು ನಾಡಗೀತೆಯನ್ನು ಹಾಡಿದರು, ಡಾ.ರಮೇಶ್ ಸಂವಿಧಾನ ಪೀಠಿಕೆಯ ವಾಚನ ಮಾಡಿದರು. ಡಾ.ಎನ್.ಡಿ.ಗೌಡ ಸ್ವಾಗತಿಸಿದರು. ಡಾ.ರವಿಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಡಾ,ಕರಿಯಣ್ಣ ವಿದ್ಯಾರ್ಥಿ ಕಾನೂನು ವೇದಿಕೆಯ ಪದಾಧಿಕಾರಿಗಳನ್ನು ಸಭೆಗೆ ಪರಿಚಯಿಸಿದರು. ಡಾ.ಶ್ರೀಶೈಲ ವಂದಿಸಿದರು, ಮುರುಗೇಶ್ ಕಾರ್ಯಕ್ರಮ ನಿರೂಪಿಸಿದರು.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon