ಪಿಯುಸಿ ಮತ್ತು ತತ್ಸಮಾನ ಉತ್ತೀರ್ಣವಾದವರಿಗೆ ಸರ್ಕಾರಿ ಕೆಲಸ ಪಡೆಯಲು ಒಂದು ಉತ್ತಮ ಅವಕಾಶವಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಹತೆ ಇರುವ ವ್ಯಕ್ತಿಗಳಿಗೆ ಒಂದು ಅವಕಾಶ ಕಲ್ಪಿಸಿದೆ. ಕಂದಾಯ ಇಲಾಖೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿ ಇರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಡೆಯಿಂದ ಅಧಿಸೂಚನೆ ಬಿಡುಗಡೆಯಾಗಿದೆ.
ಪರೀಕ್ಷೆಗೆ ಅಭ್ಯರ್ಥಿಯ ಹಾಜರಾತಿ ಕಡ್ಡಾಯವಾಗಿದೆ.
ಪಿ.ಯು.ಸಿ ಅಥವಾ ತತ್ಸಮಾನ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವರು. ಒಟ್ಟು 1,000 ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ. ವೇತನ ₹21,400 – ₹42,000.
ಅರ್ಜಿ ಸಲ್ಲಿಸುವ ವಿಧಾನ :- https://kea.kar.nic.in ಈ ವೆಬ್’ಸೈಟ್’ಗೆ ಭೇಟಿ ನೀಡಿ. ಅದರಲ್ಲಿ Village administrative officer recruitment 2024 ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್’ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದು. 04/03/2024ರ ಬೆಳಗ್ಗೆ 11.30ಕ್ಕೆ ಅರ್ಜಿ ಸಲ್ಲಿಕೆ ಆರಂಭವಾಗುತ್ತದೆ. 03/04/2024ರ ರಾತ್ರಿ 11.59ಕ್ಕೆ ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನ. ಆನ್’ಲೈನ್ ಮೂಲಕ ಶುಲ್ಕ ಪಾವತಿ ಮಾಡಲು 06/04/2024 ಕೊನೆಯ ದಿನ.
ವಿಶೇಷ ಸೂಚನೆಗಳು :-ಕೇವಲ ಆನ್’ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸುವುದು, ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವುದು, ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಅಭ್ಯರ್ಥಿಗಳಿಗೆ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಗೆ ಯಾವುದೇ ಹಕ್ಕನ್ನು ನೀಡುವುದಿಲ್ಲ.
ನೇಮಕಾತಿಯ ಸರ್ಕಾರ / ಸಕ್ಷಮ ಪ್ರಾಧಿಕಾರ / ನೇಮಕಾತಿ ಪ್ರಾಧಿಕಾರವು ನಿಗದಿ ಪಡಿಸಬಹುದಾದ ಅರ್ಹತಾ ಮಾನದಂಡಗಳಿಗೆ ಒಳಪಟ್ಟಿರುತ್ತದೆ.
ಮೇಲಿನ ಯಾವುದೇ ನಿಯಮಗಳು / ಕಾರ್ಯ ವಿಧಾನಗಳಿಗೆ ಸಂಬಂಧಿಸಿದಂತೆ ವ್ಯತ್ಯಾಸ ಅಥವಾ ಅಸ್ಪಷ್ಟತೆ ಕಂಡುಬಂದರೆ, ಕರ್ನಾಟಕ ನಾಗರೀಕ ಸೇವೆಗಳು ( ಸಾಮಾನ್ಯ ನೇಮಕಾತಿ ) ನಿಯಮಗಳು, 1977 ( ತಿದ್ದುಪಡಿಗಳು ).
ಕರ್ನಾಟಕ ನಾಗರೀಕ ಸೇವೆಗಳು ( ಸಾಮಾನ್ಯ ನೇಮಕಾತಿ ) ನಿಯಮಗಳು 2024 ( ತಿದ್ದುಪಡಿಗಳು ) ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಸಾಮಾನ್ಯ ನಿಯಮಗಳು ( ರೆವೆನ್ಯೂ ಸಬಾರ್ಡಿನೆಟ್ ಬ್ರ್ಯಾಂಚ್ ) ( C & R ) ( ತಿದ್ದುಪಡಿ ) ನಿಯಮಗಳು 2024ರಲ್ಲಿ ಇರುವಂತೆ ಅನ್ವಯವಾಗುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಇಎ ವೆಬ್’ಸೈಟ್ https://kea.kar.nic.inಗೆ ಸಂಪರ್ಕ ಮಾಡಬಹುದು.