ಚಿತ್ರದುರ್ಗ: 9 ನೇ ವರ್ಷದ ಕಾಲಭೈರವೇಶ್ವರ ಸ್ವಾಮಿ ಜಯಂತಿ ಜೋಗಿ ಗದ್ದಿಗೆ ಜೋಗಿ ಮಟ್ಟಿಯಲ್ಲಿ ಶ್ರೀ ಶ್ರೀ ಯೋಗಿ ರಾಜ ಗುರು ಮಂಗಲ ನಾಥ್ ಜಿ ರವರು ದಿವ್ಯ ಸಾನಿಧ್ಯ ವಹಿಸಿ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಮತ್ತು ಹೋಮಗಳನ್ನು ನಡೆಸಿ ಜೋಗಿ ಬಾಂಧವರು ರುದ್ರ ಅಭಿಷೇಕವನ್ನು ನೆರವೇರಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.
ಸಭಾ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಯೋಗಿ ರಾಜ್ ಗುರು ಮಂಗಲ್ ನಾಥ್ ಜಿ ನುಕಾಮಾಲೆ ಬೆಟ್ಟ ಮೊಳಕಾಲ್ಮುರು.ರವರು ಉದ್ಘಾಟಿಸಿ ರಾಜ್ಯದಲ್ಲಿ ಜೋಗಿ ಸಮಾಜವನ್ನು ರಾಜಕೀಯ ಜೀವನದಲ್ಲಿ ಮತ್ತು ಶೈಕ್ಷಣಿಕ ರಂಗದಲ್ಲಿ ಮುನ್ನಡೆಸುವಲ್ಲಿ ನಾನು ಪ್ರಮುಖ ಪಾತ್ರ ವಹಿಸುತ್ತೇನೆ. ನೀವೆಲ್ಲರೂ ಸಹ ಸಮಾಜವನ್ನು ಸಂಘಟಿಸಿ ಸಧಾ ನುಂಕೆಮಲೆ ಮಠ ನಿಮ್ಮ ಬೆಂಬಲಕ್ಕೆ ಇರುತ್ತದೆ ಎಂದು ಆಶೀರ್ವದಿಸಿದರು.
Dr.ಜಗದೀಶ್ ರವರು ಪ್ರಾಸ್ತವಿಕವಾಗಿ ಮಾತನಾಡಿ ಸಮಾಜ ಕಟ್ಟುವಲ್ಲಿ ನಾವು ವಿಫಲರಾಗಿದ್ದೇವೆ ಏಕೆಂದರೆ ರಾಜಕೀಯ ಪ್ರಾತಿನಿಧ್ಯ ಇರುವುದಿಲ್ಲ ನಾವು ಪ್ರಸ್ತುತವಾಗಿ ಒಂಬತ್ತು ವರ್ಷಗಳಿಂದ ಕಾಲಭೈರವ ಜಯಂತಿ ಆಚರಿಸುತ್ತಿದ್ದೇವೆ ಇಲ್ಲಿಯವರೆಗೂ ಸರ್ಕಾರವಾಗಲಿ ಜನಪ್ರತಿನಿಧಿಗಳಾಗಲಿ ನಮ್ಮ ಸಮುದಾಯಕ್ಕೆ ಒಂದು ಅಡಿ ಜಾಗವನ್ನು ನೀಡದೆ ಇರುವುದು ವಿಪರ್ಯಾಸ ಸಂಗತಿ ಎಂದರು.
ಮುಂದಿನ ದಿನಗಳಾಗಲ್ಲಿ ನಮ್ಮ ಸಮಾಜಕ್ಕೆ ಖಾಲಿ ನಿವೇಶನವಾಗಲಿ ನೀಡಬೇಕೆಂದು ಅಭಿಪ್ರಾಯ ತಿಳಿಸಿದರು. ಮತ್ತೊರ್ವ ಪರಮಪೂಜ್ಯ ಸಾಗರ್ ನಾಥ್ ಜಿ ಮಹಾರಾಜ್ ಹಂಡಿ ಬಡಗ ನಾಥ್ ಬೆಳಗಾಂ ಮಾತಾಡಿ ನಾಥ ಸಂಪ್ರದಾಯ ಅತಿ ಶ್ರೇಷ್ಠವಾದದ್ದು ಇಂತಹ ಪ್ರಸಿದ್ಧ ಸ್ಥಳವಾದ ಜೋಗಿಮಟ್ಟಿಯಲ್ಲಿ ಮಶ್ಚೇಂದ್ರನಾಥರು ವಾಸಿಸುತ್ತಾರೆ ಎಂದು ನೋಡಿ ಬಹಳ ಸಂತೋಷವಾಯಿತು ಇಂತಹ ಮಹಾ ಪುರುಷರ ಸ್ಥಳದಲ್ಲಿ ನಾವು ಸಹ ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗಿರುವುದು ಸೌಭಾಗ್ಯ ಜೋಗಿ ಸಮಾಜಕ್ಕೆ ಪ್ರತ್ಯೇಕ ರಾಜಕೀಯ ಶೈಕ್ಷಣಿಕ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು ಅಖಿಲ ಕರ್ನಾಟಕ ಜೋಗಿ ಸಮಾಜದ ರಾಜ್ಯ ಅಧ್ಯಕ್ಷರಾದ ಶಿವಾಜಿ ಮಧುಕರ್ ಮಾತಾಡಿ ಜಿಲ್ಲಾ ಜೋಗಿ ಕ್ಷೇಮಾಭಿವೃದ್ಧಿ ಸಂಘ ಸುಮಾರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದಲ್ಲಿ ಆರ್ಥಿಕ ನೆರವು ನೀಡಿರುವುದು ಸ್ವಾಗತ ಅರ್ಹ.
ಈ ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಶ್ರೀ ಶ್ರೀ ನಿವೃತ್ತಿನಾಥ ಮಹಾರಾಜ್ ಬಳವಟ್ಟಿ ಮಠ ಬೆಳಗಾಂ ಶಂಭುನಾಥ ಜಿ ಶ್ರೀ ಶ್ರೀ ರಾಜಗುರು ಕರ್ಜಗಿ ಮಠ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತಾಪ್ ಜೋಗಿ ರಮೇಶ್ ಬಸವರಾಜ್ ಆನಂದಪ್ಪ ಜೋಗಿ ಪ್ರಭು ಪ್ರಸಾದ್ ಸುರೇಶ್ ಬಾಬು ಜಯಣ್ಣ ವಿಶ್ವನಾಥ್ ಲತಾ ಗಿರೀಶ್ ಸಿದ್ದೇಶ್ ವಿಜಯಪ್ಪ ಮಧು ಶಶಿಧರ್ ಪ್ರಕಾಶ್ ಇನ್ನಿತರು ಭಾಗವಹಿಸಿದ್ದರು.
85% ಕ್ಕೂ ಹೆಚ್ಚು ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು ಆಕಾಶ್ ಸಿಂಚನ ಲಾವಣ್ಯ.ಯಮುನಾ ರಶ್ಮಿತಾ ಇವರಿಗೆ ತಲ 5,000 ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಈ ಸಮಯದಲ್ಲಿ ನಾಡೋಜ ಪ್ರಶಸ್ತಿ ಪಡೆದ ಗುಡ್ಡಪ್ಪ ಜೋಗಿ ಅವರಿಗೆ ಸನ್ಮಾನ ಮಾಡಲಾಯಿತು.