ಚಿತ್ರದುರ್ಗ : ತಾಲ್ಲೂಕಿನ ಮೇದೇಹಳ್ಳಿ ಪಂಚಾಯಿತಿಗೆ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಆರ್. ನಿರಂಜನ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೇದೇಹಳ್ಳಿ ಗ್ರಾಮ ಪಂಚಾಯಿತಿಗೆ ಈ ಹಿಂದೆ ಅಧ್ಯಕ್ಷರಾಗಿದ್ದ ಶ್ರೀಮತಿ ಕಾವ್ಯ ವಿಜಯಕುಮಾರ್ ರವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆಯನ್ನು ನಡೆಸಲಾಯಿತು. ಚಿತ್ರದುರ್ಗದ ಉಪ ವಿಭಾಗಾಧಿಕಾರಿಗಳಾದ ಮೆಹಬೂಬ ಜಿಲಾನಿ ಖುರೇಷಿ ಚುನಾವಣಾ ಅಧಿಕಾರಿಗಳಾಗಿ ಅಗಮಿಸಿದ್ದರು, ನಾಮಪತ್ರ ಸಲ್ಲಿಸುವ ಸಮಯದಲ್ಲಿ ವಿದ್ಯಾನಗರದಿಂದ ಮೇದೇಹಳ್ಳಿ ಪಂಚಾಯಿತಿಗೆ ಆಯ್ಕೆಯಾದ ಆರ್. ನಿರಂಜನ್ ರವರೊಬ್ಬರೆ ನಾಮಪತ್ರವನ್ನು ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳು ಅವರ ಅಯ್ಕೆಯನ್ನು ಅವಿರೋಧವಾಗಿ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿರಂಜನ್ ನನ್ನ ಅಧ್ಯಕ್ಷ ಅವಧಿ ಕಡಿಮೆ ಇದ್ದರೂ ಸಹಾ ಇರುವ ಸಮಯದಲ್ಲಿಯೇ ಮೇದೇಹಳ್ಳಿ ಪಂಚಾಯಿತಿಯಲ್ಲಿ ಉತ್ತಮವಾದ ಕೆಲಸವನ್ನು ಮಾಡಲಾಗುವುದು, ಸ್ವಚ್ಚತೆ, ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮೇದೇಹಳ್ಳಿ ಪಂಚಾಯಿತಿ ಸದಸ್ಯರಾದ ಶ್ರೀಮತಿ ಕಾವ್ಯ ವಿಜಯಕುಮಾರ್,ನಿಂಗಪ್ಪ, ಹೆಚ್.ತಿಮ್ಮಣ್ಣ, ಶ್ರೀಮತಿ ಲಕ್ಷ್ಮೀದೇವಿ ಶ್ರೀನಿವಾಸ್, ದುಗ್ಗಪ್ಪ ಎಸ್. ಶ್ರೀಮತಿ ಸುಶೀಲಮ್ಮ ಮಂಜಣ್ಣ, ಹೆಚ್ ಶ್ರೀನಿವಾಸ್, ಶ್ರೀಮತಿ ಡಿ.ಎಂ.ಶೃತಿ ವಿಜಯಕುಮಾರ್, ಶ್ರೀಮತಿ ಹೆಚ್,ಗೌರಮ್ಮ ಕೆ.ಹನುಮಂತಪ್ಪ, ಎಂ,ಜಿ, ಜಯರಾಮರೆಡ್ಡಿ, ಎಸ್.ಸಿ.ಧನ್ಯಕುಮಾರ್, ಶ್ರೀಮತಿ ಎ.ಸಿ.ಮಮತಾ ಜೆ.ಎಸ್.ಶಿವಪ್ರಕಾಶ್, ಶ್ರೀಮತಿ ಎನ್.ಎಂ, ಪ್ರಿಯಾದರ್ಶಿನಿ ಬಸವರಾಜ್ ಎ, ಶ್ರೀಮತಿ ಆರ್.ಶಶಿಕಲಾ ಮಹೇಶ್, ಆರ್ ನಿರಂಜನ್ ರಮೇಶಮೋತ್ಕೊರ್, ಶ್ರೀಮತಿ ಹೆಚ್.ಸುಲೋಚನ ಎಂ.ಸಿ.ಶಂಕರ್, ಶ್ರೀಮತಿ ವನಜಾಕ್ಷಿ ಎಂ. ಅನಂತರಾಜ್, ಶ್ರೀಮತಿ ಭಾಗ್ಯಮ್ಮ ಮಂಜಪ್ಪ, ಚಂದ್ರಶೇಖರ್ ಟಿ ಹಾಗೂ ಪಂಚಾಯಿತಿಯ ಕಾರ್ಯದರ್ಶಿ ಎನ್.ಓಮೂರ್ತಿ ಪಂಚಾಯಿತಿ ಅಭೀವೃದ್ದಿ ಅಧಿಕಾರಿ ಆರ್.ಪಾತಣ್ಣ ಹಾಜರಿದ್ದರು.
ಈ ಸಮಯದಲ್ಲಿ ಬಂಡೇ ರುದ್ರಪ್ಪ, ವಿದ್ಯಾ ನಗರದ ನಿವಾಸಿಗಳಾದ ಮಲ್ಲಿಕಾರ್ಜನ್, ವಿಜಯಕುಮಾರ್, ಶಂಕರ್, ವನಜಾಕ್ಷಮ್ಮ, ಮಂಜುನಾಥ್, ಸಿದ್ದೇಶ್, ಆನಂತಕುಮಾರ್, ಎಸ್.ಟಿ.ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು,