ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ತಮ್ಮ ಪೆಟ್ ಡಾಗ್ ‘ಕೊಕೊ’ಗೆ ಅದ್ಧೂರಿ ಹುಟ್ಟುಹಬ್ಬದ ಸಂಭ್ರಮವನ್ನು ಆಯೋಜಿಸಿದ್ದು, ಆ ಕ್ಷಣಗಳ ಫೋಟೊಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇತ್ತೀಚೆಗಷ್ಟೇ ತಮ್ಮ ಮಗ ಯಥರ್ವ್ ಹುಟ್ಟುಹಬ್ಬವನ್ನು ನೈಸರ್ಗಿಕ ಥೀಮ್ನಲ್ಲಿ ಆಚರಿಸಿದ್ದ ಯಶ್ ಫ್ಯಾಮಿಲಿ, ಈಗ ತಮ್ಮ ಮನೆಯ ಪ್ರಿಯ ಸದಸ್ಯೆಯಾದ ಕೊಕೊ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದೆ. ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಈ ಸಂಭ್ರಮದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಕೊಕೊಗೆ ಈಗ ಎರಡು ವರ್ಷಗಳು ತುಂಬಿದ್ದು, ಕುಟುಂಬದವರು ಅದನ್ನು ಹೃದಯಪೂರ್ವಕವಾಗಿ ಆಚರಿಸಿದರು. ರಾಧಿಕಾ ಪಂಡಿತ್ ತಮ್ಮ ಪೋಸ್ಟ್ನಲ್ಲಿ “ಈ ಪ್ರಪಂಚದಲ್ಲಿ ಎಲ್ಲವೂ ಷರತ್ತುಗಳ ಮೇಲೆ ನಡೆಯುತ್ತಿವೆ. ಆದರೆ ಕೊಕೊ ನಮಗೆ ನಿಜವಾದ ಪ್ರೀತಿ ಮತ್ತು ವಾತ್ಸಲ್ಯವನ್ನು ತೋರಿಸಿದೆ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು, ಕೊಕೊ!” ಎಂದು ಬರೆದು ವಿಶ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕೊಕೊ ಮುಖದ ಪ್ರತಿ ಹೊಂದಿದ ಪುಟ್ಟ ಮುದ್ದಾದ ಕೇಕ್ ತಯಾರಿಸಲಾಗಿತ್ತು. ಕೇಕ್ ಮೇಲೆ “Happy Birthday Coco – 2” ಎಂದು ಬರೆಯಲಾಗಿತ್ತು. ರಾಧಿಕಾ, ತಮ್ಮ ಮಕ್ಕಳು ಯಥರ್ವ್ ಮತ್ತು ಆಯ್ರಾ, ಪೋಷಕರು ಮತ್ತು ಮನೆಯ ಸ್ಟಾಫ್ಗಳೊಂದಿಗೆ ಈ ಪಾರ್ಟಿಯನ್ನು ಸಣ್ಣದಾಗಿ ಆದರೆ ಸ್ಮರಣೀಯವಾಗಿ ಆಚರಿಸಿದರು.
ಆದರೆ ಈ ಬಾರಿ ಪಾರ್ಟಿಯಲ್ಲಿ ಯಶ್ ಕಾಣಿಸಿಕೊಂಡಿರಲಿಲ್ಲ. ಅವರು ತಮ್ಮ ಮುಂದಿನ ಸಿನಿಮಾ “ಟಾಕ್ಸಿಕ್” ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವುದರಿಂದ ಕೊಕೊ ಹುಟ್ಟುಹಬ್ಬಕ್ಕೆ ಹಾಜರಾಗಲಿಲ್ಲ ಎನ್ನಲಾಗಿದೆ.
ರಾಧಿಕಾ ಕೊಕೊ ಜೊತೆಗೆ ಕೇಕ್ ಕತ್ತರಿಸುವ ಕ್ಷಣಗಳ ಫೋಟೊಗಳನ್ನು ಹಂಚಿಕೊಂಡಿದ್ದು, ತಮ್ಮ ಬದುಕಿನಲ್ಲಿ ಕೊಕೊ ಎಷ್ಟು ಮುಖ್ಯವೆಂದು ಬರೆದಿದ್ದಾರೆ. ಕೊಕೊ ಹುಟ್ಟುಹಬ್ಬದ ಈ ಸುಂದರ ಕ್ಷಣಗಳು ಯಶ್ – ರಾಧಿಕಾ ಕುಟುಂಬದ ಪ್ರೀತಿ ಮತ್ತು ಪೆಟ್ಗಳ ಮೇಲಿನ ಪ್ರೀತಿಯನ್ನು ಹಂಚಿಕೊಂಡಿದ್ಧಾರೆ.
































