ಚಿತ್ರದುರ್ಗ: ಮದಕರಿನಾಯಕ ಸಾಂಸ್ಕøತಿಕ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಓಬಳೇಶ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಿತರು ಸಂಗೀತ ಎಲ್ಲರ ಮನಸ್ಸನ್ನು ಆರಳಿಸುತ್ತದೆ, ಕೆಲಸ ಮಾಡಿ ದಣಿದಾಗ ಸಂಗೀತವನ್ನು ಆಲಿಸಿದಾಗ ಮನಸ್ಸು ಉಲ್ಲಾಸವಾಗುತ್ತದೆ, ನಮ್ಮ ಕಾಲದಲ್ಲಿ ಜನತೆ ಹೆಚ್ಚಿನ ಸಮಯವನ್ನು ಸಂಗೀತ ಕೇಳುತ್ತ ಕೆಲಸವನ್ನು ಮಾಡುತ್ತಿದ್ದರು. ಸಂಗೀತವನ್ನು ಆಲಿಸುತ್ತಾ ಕೆಲಸವನ್ನು ಮಾಡುವುದರಿಂದ ದೈಹಿಕವಾಗಿ ಯಾವ ಶ್ರಮವೂ ಬರುತ್ತಿರಲಿಲ್ಲ, ಇಂತಹ ಶಕ್ತಿ ಸಂಗೀತಕ್ಕೆ ಇದೆ ಎಂದರು.
ಸಂಗೀತ ಎಂದರೆ ಮಾನವ ಸೇರಿದಂತೆ ಭೂಮಿಯ ಮೇಲಿನ ಎಲ್ಲಾ ಪ್ರಾಣಿ, ಪಕ್ಷಿಗಳು ಸಹಾ ಮನವನ್ನು ಸೋಲುತ್ತವೆ. ಸಂಗೀತವನ್ನು ನುಡಿಸುವುದರಿಂದ ಅಥವಾ ಅಲಿಸುವುದರಿಂದ ಮಾನಸಿಕವಾಗಿ ಸದೃಡರಾಗ ಬಹುದಾಗಿದೆ. ರಾಜ ಮಹರಾಜರ ಕಾಲದಿಂದಲೂ ಸಹಾ ಸಂಗೀತಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತಿತ್ತು. ಇದೆ ರೀತಿ ಈಗಲೂ ಸಹಾ ಸಂಗೀತ ಎಲ್ಲರ ಮನಸ್ಸನ್ನು ಆರಳಿಸುತ್ತದೆ ಎಂದು ಓಬಳೇಶ್ ತಿಳಿಸಿದರು.
ಕಾರ್ಯಕ್ರಮವನ್ನು ತಬಲ ಬಾರಿಸುವುದರ ಮೂಲಕ ಉದ್ಘಾಟಿಸಿದ ಹಿರಿಯ ಸಂಗೀತ ಕಲಾವಿದರಾದ ಎಸ್.ವಿ.ಗುರುಮೂರ್ತಿ ಮಾತನಾಡಿ, ಸಂಗೀತ ಕಲಾವಿದರಿಗೆ ಇತ್ತಿಚಿನ ದಿನಮಾನದಲ್ಲಿ ಬೆಲೆ ಇಲ್ಲದಂತೆ ಆಗಿದೆ, ಹಿಂದಿನ ಕಾಲದಲ್ಲಿ ಸಂಗೀತಗಾರರೆಂದರೆ ಎಲ್ಲಡೆಯೂ ಸಹಾ ಗೌರವ ದೊರಕುತ್ತಿತ್ತು. ಅಲ್ಲದೆ ಇಂದಿನ ಯುವ ಜನಾಂಗ ನಮ್ಮ ಕಾಳದ ಸಂಗೀತವನ್ನು ಇಷ್ಠ ಪಡೆದೆ ಅಬ್ಬರದ ಸಂಗೀತವನ್ನು ಕೇಳುವುದಕ್ಕೆ ಮುಗಿ ಬೀಳುತ್ತಾರೆ ಎಮದು ವಿಷಾಧಿಸಿ, ಸಂಗೀತವನ್ನು ನಮ್ಮ ಮಕ್ಕಳಿಗೆ ಕಲಿಸುವುದರ ಮೂಲಕ ಸಂಗೀತ ಪರಂಪರೆಯನ್ನು ಮುಂದುವರೆಸಬೇಕಿದೆ. ಚಿತ್ರದುರ್ಗದಲ್ಲಿ ಹಲವಾರು ಸಂಗೀತ ಶಾಲೆಗಳಿವೆ ಅಲ್ಲಿಗೆ ತಮ್ಮ ಮಕ್ಕಳನ್ನು ಕಳುಹಿಸುವುದರ ಮೂಲಕ ಸಂಗೀತದ ಅಭ್ಯಾಸವನ್ನು ಮಾಡಿಸುವಂತೆ ಕರೆ ನೀಡಿದರು.
ಸಾಹಿತಿಗಳಾದ ಆನಂದಕುಮಾರ್ ಮಾತನಾಡಿ, ಸಂಗೀತ ಎನ್ನವುದು ಎಲ್ಲರಿಗೂ ಸಹಾ ಅಗತ್ಯವಾಗಿದೆ. ಇದರಲ್ಲಿ ಮಾನವ, ಪ್ರಾಣಿ ಎಂಬ ಬೇಧ ಇಲ್ಲ, ಸಂಗೀತಕ್ಕೆ ಸೋಲದವರು ಯಾರು ಸಹಾ ಇಲ್ಲ, ಸಪ್ತ ಸ್ವರಗಳು ನಮ್ಮ ಬದುಕಿಗೆ ಅಡಿಪಾಯಗಳಾಗಿವೆ ಎಂದರು.
ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷರಾದ ಗೋಪಾಲಸ್ವಾಮಿ ನಾಯಕ್ ಮಾತನಾಡಿ, ಸಂಗೀತ ಕಲೆಯನ್ನು ಉಳಿಸಿ ಬೆಳಸಬೇಕೆಂಬ ನಿಟ್ಟಿನಲ್ಲಿ ಪ್ರತಿ ವರ್ಷವೂ ಸಹಾ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಂಗೀತ ಕಲಾವಿದರನ್ನು ಸನ್ಮಾನಿಸಲಾಗುವುದು. ಸಂಗೀತ ಕಲಾವಿದರನ್ನು ಸರ್ಕಾರ ಗುರುತಿಸಿ ಗೌರವನ್ನು ನೀಡಬೇಕಿದೆ ಇದಕ್ಕಾಗಿ ಅರ್ಜಿಯನ್ನು ಹಾಕುವು ಸಂಪ್ರದಾಯ ಬಿಡಬೇಕಿದೆ. ಚಿತ್ರದುರ್ಗ ಸಂಗೀತಗಾರರಿಗೆ ತವರು ಮನೆ ಇದ್ದ ಹಾಗೇ ಎಂದರು.
ಕಾರ್ಯಕ್ರಮದಲ್ಲಿ ಹಿಂದೂಸ್ತಾನಿ ಶಾಸ್ತ್ರಿಯ ಸಂಗೀತ ಕಲಾವಿದರಾದ ಸುಜಿತ್, ವಯೋಲಿನ್ವಾದ ಕಲಾವಿದರಾದ ಶ್ರೀಮತಿ ಭವ್ಯರಾಣಿ, ಜಿ.ಪಂ.ಮಾಜಿ ಉಪಾಧ್ಯಕ್ಷರಾದ ಕೆ.ಪಾಪಯ್ಯ, ಕೌಶಲ್ಯಾಧಿಕಾರಿ ಕಾಟೇಗೌಡ್ರ, ಕಣೀವೆ ಮಾರಮ್ಮ ಸಂಸ್ಕøತಿಕ ವೇದಿಕೆಯ ಅಧ್ಯಕ್ಷ ತಿಪ್ಪೇಸ್ವಾಮಿ, ಶ್ರೀನಿವಾಸ್ ಮಳಲಿ, ಓಬಯ್ಯ, ರವಿಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕನ್ನಡ ರಾಜೋತ್ಸವ ಪ್ರಶಸ್ತಿ ಪುರಸ್ಕøತರಾದ ಹುಣಸೇಕಟ್ಟೆ ಗ್ರಾಮದ ಓಬಳೇಶ್ರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸ್ತ್ರಿಯ ಸಂಗೀತ, ಹಿಂದೂಸ್ತಾನಿ ಸಂಗೀತ, ವಯೋಲಿನ್ ವಾದನ, ಜಾನಪದ ಸಂಗೀತ, ತತ್ವ ಪದಗಳು, ವಚನ ಸಂಗೀತ, ಸುಗಮ ಸಂಗೀತ, ಭಕ್ತಿ ಸಂಗೀತ, ಕನ್ನಡ ಗೀತ ಗಾಯನ ಹಾಗೂ ರಂಗ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು