ಬೆಂಗಳೂರು : ಡಿಕೆ ಶಿವಕುಮಾರ್ ಜೊತೆ ಸೇರಿ ರಮೇಶ್ ಜಾರಕಿಹೊಳಿ ಅವರ ಸಿಡಿ ಮಾಡಿಸಿದ್ದೇ ವಿಜಯೇಂದ್ರ ಅಂತ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಾನು ಮನೆಯಲ್ಲಿ ಸುಮ್ಮನೆ ಕೂರಲ್ಲ. ಬೀದರ್ ನಿಂದ ಚಾಮರಾಜನಗರ, ಕೋಲಾರದಿಂದ ಕೊಡಗಿನವರೆಗೆ ಪ್ರವಾಸ ಮಾಡ್ತೇನೆ. ಇವರ ವಿರುದ್ಧ ಹೋರಾಟ ನಿಲ್ಲಿಸಲ್ಲ, ಹಿಂದೂಗಳ ರಕ್ಷಣೆಗೆ ರಾಜ್ಯ ಪ್ರವಾಸ. ಅಪ್ಪಮಕ್ಕಳ ಕುಟುಂಬವನ್ನು ರಾಜಕೀಯದಿಂದ ದೂರ ಮಾಡ್ತೇನೆ ಶಪಥ ಮಾಡಿದ್ದಾರೆ ಎಂದು ಬಿಜೆಪಿಯಿಂದ ಉಚ್ಛಾಟನೆಗೊಂಡ ಬಳಿಕ ಮತ್ತೆ ಬಿಎಸ್‌ವೈ ಕುಟುಂಬದ ವಿರುದ್ಧ ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ಇರುವ ನಮ್ಮ ಸಂಸದರು ಎಲ್ಲರೂ ವಿಜಯೇಂದ್ರ ವಿರುದ್ಧ ಇದ್ದಾರೆ, ವಿಜಯೇಂದ್ರನನ್ನ ತೆಗೀರಿ ಅಂತಿದ್ದಾರೆ. ರಮೇಶ್ ಜಾರಕಿಹೊಳಿ ಸಿಡಿ ಹಗರಣ ಮಾಡಿದ್ದೇ ವಿಜಯೇಂದ್ರ ಮತ್ತು ಡಿಕೆಶಿ. ಡಿಕೆಶಿ ಜೊತೆ ಸೇರಿ ವಿಜಯೇಂದ್ರ ರಮೇಶ್ ಜಾರಕಿಹೊಳಿ ಸಿಡಿ ಮಾಡಿಸಿದ್ರು. ಈಗ ಎದ್ದಿರುವ ಹನಿಟ್ರ‍್ಯಾಪ್ ಹಗರಣದಲ್ಲೂ ಇದೇ ಟೀಮ್ ಇದೆ ಎಂದಿದ್ದಾರೆ.
ಯಡಿಯೂರಪ್ಪ, ಮಗ ವಿಜಯೇಂದ್ರ ಕೂಡಿ ನನ್ನ ಉಚ್ಚಾಟನೆಗೆ ಹೈಕಮಾಂಡ್ ಮೇಲೆ ಒತ್ತಡ ಹಾಕಿಸಿದ್ರು. ಉಚ್ಚಾಟನೆ ಮಾಡಿದ್ರೆ ಬಿಜೆಪಿ ಬಿಟ್ ಹೋಗ್ತಾರೆ ಅಂತ ಮಾಡಿಸಿದ್ದಾರೆ. ವೀರಶೈವ ಲಿಂಗಾಯತ ಸಮುದಾಯ ಯಡಿಯೂರಪ್ಪ, ವಿಜಯೇಂದ್ರ ಜೊತೆಯಿಲ್ಲ. ಮಹಾಭಾರತ, ರಾಮಾಯಣ ಕಾಲದಿಂದಲೂ ಈಥರದ ಅನ್ಯಾಯ ನಡೆದುಕೊಂಡು ಬರ್ತಿದೆ. ಆದ್ರೆ ನಾನು ಉಚ್ಛಾಟನೆ ಮರುಪರಿಶೀಲನೆಗೆ ಮನವಿ ಮಾಡಲ್ಲ, ನಮ್ಮ ತಂಡದವರು ಮನವಿ ಮಾಡ್ತಾರೆ ಎಂದು ತಿಳಿಸಿದರು.