ಮನುಷ್ಯ ಆರೋಗ್ಯಕರವಾಗಿರಲು ದಿನಕ್ಕೆ 3-4 ಲೀಟರ್ ನೀರು ಕುಡಿಯಬೇಕು. ಈ ಸುಡು ಬೇಸಿಗೆಯಲ್ಲಂತೂ ದೇಹವನ್ನು ಹೈಡ್ರೇಟೆಡ್ ಆಗಿ ಇಟ್ಟುಕೊಳ್ಳಲು ದೇಹಕ್ಕೆ ಸರಿಹೊಂದುವಷ್ಟು ನೀರು ಕುಡಿಯಬೇಕು. ವಯಸ್ಸು, ದೇಹದ ತೂಕ, ಮಾಡೋ ಕೆಲಸ, ವಾತಾವರಣದ ಮೇಲೆ ಮನುಷ್ಯ ಎಷ್ಟು ನೀರು ಕುಡಿಯಬೇಕು ಎನ್ನುವುದು ಡಿಪೆಂಡ್ ಆಗಿರುತ್ತೆ.
ಯಾರು ಎಷ್ಟು ನೀರು ಕುಡಿದೆ ಒಳ್ಳೆಯದು ? ಸಾಮಾನ್ಯ ವ್ಯಕ್ತಿಗಳು ದಿನಕ್ಕೆ 3 ರಿಂದ 4 ಲೀಟರ್ ನೀರು ಕುಡಿಬೇಕು. ಆದರೆ ಮನೆಯಲ್ಲಿ ಮನೆಯಲ್ಲಿ ಇರುವ ಹೆಂಗಸರು ಹೆಚ್ಚು ಕೆಲಸ ಮಾಡುವ ಕಾರಣ ಜಾಸ್ತಿ ನೀರು ಕುಡಿಯಬೇಕು. ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗೋರು, ಎಸಿ ರೂಮ್ ಅಲ್ಲಿ ಕೂತು ಕೆಲಸ ಮಾಡೋರು ದಿನಕ್ಕೆ 2.5 ಲೀಟರ್ ಇಂದ 3 ಲೀಟರ್ ನೀರು ಕುಡಿದರೆ ಉತ್ತಮ. ಹೆಚ್ಚು ಹೊರಗಡೆ ತಿರುಗಾಡುವವರು, ಬಿಸಿಲಲ್ಲಿ ಕೂಲಿ ಕೆಲಸ ಮಾಡುವವರು ದಿನಕ್ಕೆ 4 ಲೀಟರ್ ಇಂದ 5 ಲೀಟರ್ ನೀರು ಕುಡಿಬೇಕು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು..ಅಂದರೆ ಕಿಡ್ನಿ, ಹಾರ್ಟ್, ಶುಗರ್ ಪ್ರಾಬ್ಲಮ್ ಇರೋರು ಡಾಕ್ಟರ್ ಹತ್ರ ಕೇಳಿ ಎಷ್ಟು ಬೇಕೋ ಅಷ್ಟೇ ನೀರು ಕುಡಿಬೇಕು. ಸರಿಯಾಗಿ ನೀರು ಕುಡಿಯುವ ವಿಧಾನ : ಯಾವಾಗಲೂ ಸ್ವಲ್ಪ ಸ್ವಲ್ಪನೇ ನೀರು ಕುಡಿಯಬೇಕು. ಅದೇ ಕಾರಣಕ್ಕೆ ಯಾರದ್ದಾದರು ಮನೆಗೆ ಹೋದಾಗ ಮೊದಲು ಒಂದು ಗ್ಲಾಸ್ ನೀರು ಕೊಡುದು. ಒಂದು ಗ್ಲಾಸ್ ನೀರು ಕುಡಿದರೆ ಒಮ್ಮೆಯ ಸುಸ್ತು ಇಳಿದಂತಾಗುತ್ತದೆ. ಹಾಗೆಂದು ಒಂದೇ ಸಮನೇ ಜಾಸ್ತಿ ನೀರು ಕುಡಿಯುವುದರಿಂದ ದೇಹಕ್ಕೆ ತೊಂದರೆ ಆಗುತ್ತೆ. ಸಿಹಿ ಇರೋ ಡ್ರಿಂಕ್ಸ್, ಸೋಡಾಗಳನ್ನು ಯಾವಾಗ ಬೇಕೆಂದರಾವಾಗ ಕುಡಿಯಬಾರದು. ಬಾಯಾರಿಕೆ ಆದ ವೇಳೆಯಂತೂ ಇವುಗಳನ್ನು ಕುಡಿಯಲೇ ಬಾರದು. ಒಂದು ವೇಳೆ ಕುಡಿದರೆ ಹೊಟ್ಟೆಯಲ್ಲಿ ಡೀಹೈಡ್ರೇಶನ್ ಆಗಬಹುದು. ಹಾಗಾಗಿ ಬಾಯಾರಿಕೆಯಾದ ಸಂದರ್ಭ ಉಗುರು ಬೆಚ್ಚಗಿನ ನೀರು ಅಥವಾ ರೂಮ್ ಟೆಂಪರೇಚರ್ ನೀರು ಕುಡಿದರೆ ಒಳ್ಳೆಯದು. ಇದರಿಂದ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ. ಆದರೆ, ತುಂಬಾ ತಣ್ಣಗಿರೋ ನೀರು ಕುಡಿದರೆ ಜೀರ್ಣ ಸಮಸ್ಯೆಗಳು ಬರಬಹುದು. ಮಿತವಾಗಿ ಸರಿಯಾದ ಸಮಯದ ಅಂತರ ಕಾಯ್ದುಕೊಂಡು ನೀರು ಕುಡಿಯುವುದು ಒಳ್ಳೆಯದು. ವಾತಾವರಣ ಬಿಸಿ ಇದ್ರೆ ಜಾಸ್ತಿ ನೀರು ಕುಡಿಬೇಕು. ಜಾಸ್ತಿ ಬೆವರು ಬರೋ ಟೈಮ್ ಅಲ್ಲೂ ನೀರು ಜಾಸ್ತಿ ಕುಡಿಯೋದು ಮುಖ್ಯ. ಆದ್ರೆ ಒಂದೇ ಸಮನೆ ಕುಡಿಯಬಾರದು. ಮುಖ್ಯವಾಗಿ ತಲೆ ಸುತ್ತು ಬಂದ ಸಂದರ್ಭ,ಅಸ್ತಮ ಸಮಸ್ಯೆ ಇರುವವರು ಅಥವಾ ಹೆಚ್ಚು ರಕ್ತಸ್ರಾವದಂತಹ ಸಮಸ್ಯೆಗಳು ಉಂಟಾದಾಗ ನೀರು ಕುಡಿಯಬಾರದು. ಒಂದು ವೇಳೆ ನೀರು ಕುಡಿಸಿದ್ದೇ ಆದರೆ ಆ ವ್ಯಕ್ತಿ ಕೋಮಕ್ಕೂ ಹೋಗಬಹುದು ಅಥವಾ ಆತನ ಪ್ರಾಣಪಕ್ಷಿಯೇ ಹಾರಿ ಹೋಗಬಹುದು ಹಾಗಾಗಿ ಈ ಸಮಯ ನೀರಿಗಿಂತ ವಾಯು ಮುಖ್ಯವಾಗಿರುತ್ತದೆ ಎಂಬುವುದನ್ನು ತಿಳಿದಿರಬೇಕು.