ಬೆಂಗಳೂರು ಉಪಚುನಾವಣೆಯಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆಲುವು ಸಾಧಿಸಿದ್ದಾರೆ . ಎನ್ ಡಿ ಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ದೋಸ್ತಿ ನಾಯಕರಿಗೆ ಟಕ್ಕರ್ ಕೊಟ್ಟಿದ್ದಾರೆ. ಬಿಜೆಪಿಯಿಂದಲ್ಲೇ ಸ್ಪರ್ಧೆ ಮಾಡುವ ಆಸೆ ಹೊಂದಿದ್ದ ಸಿಪಿ ಯೋಗೇಶ್ವರ್ ಗೆ ಬಿಜೆಪಿ ನಾಯಕರು ಬೆಂಬಲಿಸಲಿಲ್ಲ ಸ್ಪರ್ಧೆ ಮಾಡೋದಾದ್ರೆ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧೆ ಮಾಡಿ ಎಂದರು ಇದಕ್ಕೆ ನಾನು ಜೆಡಿಎಸ್ ನಿಂದ ಸ್ಪರ್ಧೆ ಮಾಡೋದಿಲ್ಲ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿ ಸಿಪಿ ಯೋಗೇಶ್ವರ್ ಗೆಲುವು ಸಾಧಿಸಿದ್ದಾರೆ. ಸಿಪಿ ಯೋಗೇಶ್ವರ್ ಚನ್ನಪಟ್ಟಣದಲ್ಲಿ ಗೆಲುವಿಗೆ ಒಂದಿಷ್ಟು ಕಾರಣಗಳಿವೆ, ಕ್ಷೇತ್ರದಲ್ಲಿ ಸ್ವತಃ ಯೋಗೇಶ್ವರ್ ಪ್ರಭಾವ ಮತ್ತು ವರ್ಚಸ್ಸು ಇದದ್ದು, ಯೋಗೇಶ್ವರ್ ಶಾಸಕರಾದ ಸಂದರ್ಭದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು, ಅದರಲ್ಲಿ ಪ್ರಮುಖವಾಗಿ ನೀರಾವರಿ ಕೆಲಸಗಳಿಗೆ ಮತದಾರ ಜೈ ಎಂದಿದ್ದಾರೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸ್ಪರ್ಧೆ ಮಾಡಿದ್ದು ಸಹ ಯೋಗೇಶ್ವರ್ ಗೆ ವರ್ಕ್ ಔಟ್ ಆಗಿದೆ. ಕ್ಷೇತ್ರದಲ್ಲಿ ಸಿಪಿ ಯೋಗೇಶ್ವರ್ ಜೊತೆ ಡಿಕೆ ಬ್ರದರ್ಸ್ ಬೆನ್ನಿಗೆ ನಿಂತಿದ್ದು ಯೋಗೇಶ್ವರ್ ಗೆ ಹೆಚ್ಚು ಅನುಕೂಲವಾಗಿದೆ. ಡಿಕೆ ಬ್ರದರ್ಸ್ ಶಕ್ತಿಯ ಜೊತೆ ತಮ್ಮದೇ ಆದ ವೋಟ್ ಬ್ಯಾಂಕ್ ಹೊಂದಿರುವ ಯೋಗೇಶ್ವರ್ ಮತದಾರ ಕೈ ಹಿಡಿದಿದ್ದಾರೆ. ಇನ್ನೂ ಜಮೀರ್ ಅಹಮದ್ ಹೇಳಿಕೆಯಿಂದ ಮುಸ್ಲಿಂ ಸಮುದಾಯದ ಮತಗಳು ಸಾಲಿಡ್ ಆಗಿ ಯೋಗೇಶ್ವರ್ ಪಾಲಾಗಿದೆ ಎಂದು ಹೇಳಬಹುದು. ಜಮೀರ್ ಹೆಚ್ ಡಿಕೆ ಬಗ್ಗೆ ಆಡಿದ ಮಾತುಗಳು ಚನ್ನಪಟ್ಟಣದಲ್ಲಿ ನಿರೀಕ್ಷಿತ ಪರಿಣಾಮ ಚುನಾವಣೆಯ ಮೇಲೆ ಬೀಳಲಿಲ್ಲ. ಇನ್ನೂ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಕೈ ಹಿಡಿದ ತ್ರಿಬಲ್ ಲೀಡರ್ ತಂತ್ರಗಾರಿಕೆ. ಸಿಪಿವೈ+ಡಿಕೆಶಿ+ಡಿಕೆಸು ರಣತಂತ್ರ ಸಕ್ಸಸ್ ಆಗಿದೆ. ಚನ್ನಪಟ್ಟಣ ಗೆಲುವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಶ್ರಮ ಹಾಕಿದ್ದ ಡಿಕೆ ಬ್ರದರ್ಸ್ ಕೊನೆಯತನಕವೂ ಸಿಪಿ ಯೋಗೇಶ್ವರ್ ಜೊತೆ ನಿಂತಿದ್ದರು. ಪದೇ ಪದೇ ಚನ್ನಪಟ್ಟಣಕ್ಕೆ ಡಿಕೆಶಿ ಭೇಟಿ ನೀಡಿ 500 ಕೋಟಿ ಮೊತ್ತದ ಕಾರ್ಯಕ್ರಮಗಳ ಘೋಷಣೆ, ಉದ್ಯೋಗ ಮೇಳ ನಡೆಸಿದ್ದು ಎಲ್ಲಾ ಕಾಂಗ್ರೆಸ್ ಗೆ ಪ್ಲಸ್ ಆಗಿದೆ ಇದರ ಜೊತೆಗೆ ಕಾಂಗ್ರೆಸ್ ಗೆ ಫಲ ಕೊಟ್ಟ ಒಕ್ಕಲಿಗ ವೋಟ್ ಬ್ಯಾಂಕ್ ಪಾಲಿಟಿಕ್ಸ್ . ಚನ್ನಪಟ್ಟಣ ಗೆದ್ದರೆ ಡಿಕೆಶಿಗೆ ಸಿಎಂ ಪಟ್ಟ ಒಲಿಯುವ ಸಂದೇಶ ರವಾನೆ ಮಾಡಿದ್ದು ಒಕ್ಕಲಿಗ ಮತಗಳು ಕ್ರೂಢೀಕರಣಕ್ಕೆಸಹಾಯವಾಗಿದೆ ಎಂದು ಹೇಳಲಾಗುತ್ತಿದೆ. ಇದ್ರ ಜೊತೆ ಮುಸ್ಲಿಂ,ಕುರುಬ, ತಿಗಳ, ಅರಸು ಸೇರಿ ಹಿಂದುಳಿದ ಮತಬ್ಯಾಂಕ್ ಸಹ ಕಾಂಗ್ರೆಸ್ ಪಾಲಾಗಿದೆ.ಹಾಗೇ ಕಾಂಗ್ರೆಸ್ ನ ೫ ಗ್ಯಾರಂಟಿಗಳಿಗೆ ಮತ್ತೆ ಮನ್ನಣೆ ಎಂಬ ವಿಶ್ಲೇಷಣೆ ಸಹ ಮಾಡಲಾಗುತ್ತಿದೆ, ಮಹಿಳಾ ಮತದಾರರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಬಿಜೆಪಿಯ ಕೆಲ ಸ್ಥಳೀಯ ಮುಖಂಡರ ಅಸಹಕಾರ ಕಾಂಗ್ರೆಸ್ ಗೆ ಪ್ಲಸ್. ಅಲ್ದೇ ಜೆಡಿಎಸ್ ಗೆ ಒಳ ಏಟು ಸಹ ಪೆಟ್ಟು ಬಿದಿದ್ದೆ. ಜೆಡಿಎಸ್ ಜೊತೆ ಮೈತ್ರಿ ಒಪ್ಪದ ಸ್ಥಳೀಯ ಬಿಜೆಪಿ ಮುಖಂಡರು.ಉಪಚುನಾವಣೆಗಳಲ್ಲಿ ಸಹಜವಾಗಿ ಅಧಿಕಾದಲ್ಲಿರುವ ಪಕ್ಷದತ್ತ ಮತದಾರರ ಒಲವು ಹೋಗುವ ಮನಸ್ಥಿತಿ ಇರಲಿದೆ ಎಂಬುವುದು ಇಲ್ಲಿ ಮತ್ತೆ ನಿಜವಾಗಿದೆ.
