ಬೆಂಗಳೂರು: ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಖರೀದಿ ಮಾಡಲು ನೀಡಿದ್ದ ಅನುದಾನದಲ್ಲಿ 7 ಕೋಟಿ ರೂಪಾಯಿಗಳನ್ನು ಸರ್ಕಾರ ಕಡಿತ ಮಾಡಿ ಆದೇಶ ಹೊರಡಿಸಿದೆ.
2022-23ನೇ ಸಾಲಿನಲ್ಲಿ ಸರ್ಕಾರ 1 ರಿಂದ 10 ನೇ ತರಗತಿ ಮಕ್ಕಳಿಗೆ 1 ಜೊತೆ ಶೂ, ಎರಡು ಜೊತೆ ಸಾಕ್ಸ್ ಖರೀದಿಗೆ 132 ಕೋಟಿ ಹಣ ಬಿಡುಗಡೆ ಮಾಡಿತ್ತು.
ಈಗ ಅದನ್ನು 125 ಕೋಟಿಗೆ ಇಳಿಸಲಾಗಿದೆ. ಉತ್ತಮ ಗುಣಮಟ್ಟದ ವಸ್ತುಗಳನ್ನು ನೀಡಲು ಸರ್ಕಾರ ಆದೇಶಿಸಿದ್ದು, ಹಣ ಸಾಕಾಗದಿದ್ದರೆ ಸಂಘ ಸಂಸ್ಥೆಗಳ ಮೊರೆ ಹೋಗುವಂತೆ ಸರ್ಕಾರ ಸೂಚಿಸಿದೆ.