ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ 2,000 ರೂ. ಬಿಡುಗಡೆ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ನೌಕರರಿಗೂ ಸಂಬಳ ಕೊಡುವಾಗಲೂ ಒಂದು ತಿಂಗಳು ಆದ ಮೇಲೆಯೇ ಇನ್ನೊಂದು ತಿಂಗಳದ್ದು ಹಾಕ್ತೀವಿ. 2 ತಿಂಗಳು ಲೇಟ್ ಆಗಿರೋದು ಸತ್ಯ. ಆದರೆ ನಾಲ್ಕೈದು ದಿನಗಳಲ್ಲಿ ಸಮಸ್ಯೆಯ ಪರಿಹಾರ ಮಾಡುತ್ತೇವೆ ಎಂದು ಹೇಳಿದ್ದಾರೆ.
ಚುನಾವಣೆಗಾಗಿ ನಾವು ಹಣ ಹಾಕಲ್ಲ. ಆರೋಪ ಮಾಡೋರು ಏನೇ ಮಾಡಿದ್ರು ಆರೋಪ ಮಾಡ್ತಾರೆ. 14 ತಿಂಗಳು ಯಾವುದೇ ಎಲೆಕ್ಷನ್ ಇರಲಿಲ್ಲ. ಆದರೆ 14 ತಿಂಗಳಿಂದ ಹಣ ಹಾಕ್ತಿದ್ದೇವೆ. ಚುನಾವಣೆಗಾಗಿ ಹಣ ಹಾಕೋ ಆಗಿದ್ರೆ ಚುನಾವಣೆ ಸಮಯದಲ್ಲಿ ಮಾತ್ರ ಹಾಕ್ತಿದ್ವಿ ಅಷ್ಟೆ ಎಂದು ತಿಳಿಸಿದರು.