ಬೆಂಗಳೂರು : ಭಾರತ ಖ್ಯಾತ ಹೃದಯ ಶಸ್ತ್ರಚಿಕಿತ್ಸಕರಲ್ಲಿ ಒಬ್ಬರಾದ ಡಾ ಕೆ ಎಂ ಚೆರಿಯನ್ ಅವರು ಶನಿವಾರದಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.
1942ರ ಮಾರ್ಚ್ 8ರಂದು ಜನಿಸಿದ ಡಾ ಚೆರಿಯನ್ ಅವರು ಐದು ದಶಕಗಳವರೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಡಾ ಚೆರಿಯನ್ ಅವರು ಭಾರತದಲ್ಲಿ ಮೊದಲ ಕರೋನರಿ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಮಾಡಿದ ವೈದ್ಯರಾಗಿದ್ದು, ಹೃದ್ರೋಗ ಕ್ಷೇತ್ರದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ್ದಾರೆ.
ಡಾ ಚೆರಿಯನ್ ಭಾರತದ ಮೊದಲ ಹೃದಯ ಮತ್ತು ಶ್ವಾಸಕೋಶದ ಕಸಿ, ಮೊದಲ ಮಕ್ಕಳ ಕಸಿ ಮತ್ತು ಮೊದಲ ಲೇಸರ್ ಹೃದಯ ಶಸ್ತ್ರಚಿಕಿತ್ಸೆಯನ್ನು ಮಾಡಿ ಇತಿಹಾಸ ನಿರ್ಮಿಸಿದರು. ಅವರು ಪೀಡಿಯಾಟ್ರಿಕ್ ಕಾರ್ಡಿಯಾಕ್ ಸರ್ಜರಿಯಲ್ಲಿ ಟ್ರಯಲ್ಬ್ಲೇಜರ್ ಆಗಿದ್ದರು.
ಚೆನ್ನೈನಲ್ಲಿ ಫ್ರಾಂಟಿಯರ್ ಲೈಫ್‌ಲೈನ್ ಆಸ್ಪತ್ರೆ ಸ್ಥಾಪಿಸುವುದರ ಜೊತೆಗೆ, ಸ್ಥಳೀಯ ಹೃದಯ ಕವಾಟ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಪ್ರಮುಖ ವೈದ್ಯಕೀಯ ವಿಜ್ಞಾನ ಪಾರ್ಕ್ ಆಗಿರುವ ಫ್ರಂಟಿಯರ್ ಮೆಡಿವಿಲ್ಲೆ ಸ್ಥಾಪಿಸುವ ಮೂಲಕವೂ ಅವರು ವೈದ್ಯಕೀಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ವೇಳೆ ಡಾ. ಚೆರಿಯನ್ ಅವರು ಹಠಾತ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ.