ಒಳಮೀಸಲಾತಿ : ಹೆಚ್.ಎನ್.ನಾಗಮೋಹನ್‌ದಾಸ್ ಆಯೋಗದ ವರದಿ ತಾರತಮ್ಯ.!ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

WhatsApp
Telegram
Facebook
Twitter
LinkedIn

 

ಚಿತ್ರದುರ್ಗ: ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್ ಆಯೋಗದ ವರದಿ ತಾರತಮ್ಯ ಮತ್ತು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಹಾಗಾಗಿ ಈ ವರದಿಯನ್ನು ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಪೂರಕವಾಗಿಲ್ಲ ಎಂದು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ೭೦ ವರ್ಷಗಳು ಕಳೆದರು ಸಹ ಅಧ್ಯಯನ ಮತ್ತು ಸಮೀಕ್ಷೆ ಆಗಿಲ್ಲ, ಕೇವಲ ಕೆಲವು ವರ್ಗಗಳ (ಜಾತಿಗಳ) ವರದಿಯನ್ನು ಒಂದು ವರ್ಷದಿಂದ ಇಡಿದು ೦೫ ವರ್ಷದವರೆಗೆ ಮಾತ್ರ ಸಮೀಕ್ಷೆಗೊಳಪಡಿಸಿದ್ದಾರೆ.

ಕಳೆದ ೧೫ ವರ್ಷದಲ್ಲಿ ಭೋವಿ ಜನಾಂಗದ ಜನಸಂಖ್ಯೆ ಗಣನೀಯವಾಗಿ ಏರಿದ್ದರು ಸಹ ಕೇವಲ ೯೯೮೬ ಜನಗಳನ್ನು ಮಾತ್ರ ತೋರಿಸಿದೆ. ಶೇಕಡ ೧ ರಷ್ಟು ಹೆಚ್ಚಳ ಎಂದು ತೋರಿಸಲಾಗಿದೆ, ಆದರೆ ಈ ಸಮುದಾಯ ೧೫%ಕ್ಕಿಂತ ಹೆಚ್ಚಾಗಿರುತ್ತದೆ, ಅರೆ ಅಲೆಮಾರಿ ಸಮುದಾಯವಾಗಿರುವುದರಿಂದ ಸಮೀಕ್ಷೆ ಮಾಡುವವರು ಅವರ ಬಳಿ ಹೋಗಿರುವುದಿಲ್ಲ ಎಂದರು.

ಆಯೋಗದ ೨೬ ಮಾನದಂಡಗಳಲ್ಲಿ ೧೯ ಮಾನದಂಡಗಳು ಈ ಸಮುದಾಯ ಅತೀ ಹಿಂದುಳಿವಿಕೆಯಲ್ಲಿದೆ ಎಂಬ ವರದಿ ಇದ್ದರೂ ಸಹ ಮುಂದುವರೆದ ಸಮುದಾಯದ ಪಟ್ಟಿಯಲ್ಲಿ ಸೇರಿಸಿದ್ದಾರೆ. ನಾವು ಸಮೀಕ್ಷೆಯ ಕುರಿತು ಪ್ರಾರಂಭದಿAದಲೂ ಆಯೋಗಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ಸರಿಯಾಗಿ ಸಮೀಕ್ಷೆ ನಡೆಯುತ್ತಿಲ್ಲವೆಂದು ಪದೇ ಪದೇ ಎಚ್ಚರಿಕೆ ನೀಡಿದ್ದರು ಸಹ ಲೋಪವೆಸಗಿದ್ದಾರೆ. ಸರ್ಕಾರಿ ಕಚೇರಿಯಲ್ಲೇ ಪರಿಪೂರ್ಣ ಸಮೀಕ್ಷೆ ನಡೆಸಲು ಸಾಧ್ಯವಾಗದಿದ್ದಾಗ, ಮನೆ ಮನೆ ಸಮೀಕ್ಷೆ ಪೂರ್ಣ ಪ್ರಮಾಣದ ಸಮೀಕ್ಷೆ ಎಂಬುದು ದೂರದ ಮಾತು.

ಸೌಲಭ್ಯಗಳು ಕಲ್ಪಿಸುವ ಉದ್ದೇಶದಿಂದ ಉಪ ವರ್ಗೀಕರಣದಲ್ಲಿ ಭೋವಿ ಸಮುದಾಯವನ್ನಷ್ಟೇ ವರ್ಗೀಕರಿಸಬೇಕು, ಭೋವಿ ಸಮುದಾಯಕ್ಕೆ ಯಾವುದೆ ಸಮುದಾಯದ ಜೊತೆ ಸೇರಿಸದೇ ಪ್ರತ್ಯೇಕವಾಗಿ ಅವಕಾಶ ಕಲ್ಪಿಸಲು ಆಗ್ರಹಿಸುತ್ತೇವೆ.

ನಾಗಮೋಹನ್‌ದಾಸ್ ರವರು ಹೇಳುವಂತೆ “ಶೈಕ್ಷಣಿಕವಾಗಿ ಉನ್ನತ ಶಿಕ್ಷಣವಿಲ್ಲ ಮತ್ತು ಸರ್ಕಾರಿ ಉದ್ಯೋಗವಿಲ್ಲದ ಸಣ್ಣ ಸಣ್ಣ ಸಮುದಾಯಗಳ ಜನಜೀವನ ಇನ್ನೂ ಹೀನಾಯವಾಗಿದೆ, ಅಪ್ಪಿತಪ್ಪಿ ಕೆಲವರು ಉನ್ನತ ಶಿಕ್ಷಣ ಪಡೆದರೂ ಸಹ ಇದೇ ವರ್ಗದ ಬಲಿಷ್ಠರ ಜೊತೆ ಸ್ಪರ್ದೇ ಮಾಡಲು ಸಾಧ್ಯವಾಗಲಿಲ್ಲ. ಮೀಸಲಾತಿ ಜಾರಿಯಲ್ಲಿದ್ದರು ಸಹ ಇದರ ಸವಲತ್ತು ಈ ಜನವರ್ಗಕ್ಕೆ ತಲುಪೇ ಇಲ್ಲ.” ಎಂದಿದ್ದಾರೆ ಆ ಪಟ್ಟಿಯಲ್ಲಿ ಓಡ್, ಒಡೇ, ಕಲ್ಲು ವಡ್ಡರ್, ಮಣ್ಣು ಒಡ್ಡರ್ ಏಕೆ ಪ್ರಸ್ತಾಪವಾಗಿಲ್ಲ.

ಆಳವಾದ ಅಧ್ಯಯನದ ಆಧಾರವಾಗಬೇಕು ಎಂದು ನಡೆದಿರುವ ಗಣತಿ ಭೋವಿ ಸಮುದಾಯಕ್ಕೆ ಅತ್ಯಂತ ಅನ್ಯಾಯವನ್ನು ಮಾಡಿದೆ. ಅಲೆಮಾರಿಗಳಲ್ಲಿ ಭೋವಿ ಸಮುದಾಯ ಸ್ವಂತ ಮನೆ ಮತ್ತು ಗುಡಿಸಲು ಇಲ್ಲದೇ ಊರೂರು ಅಲೆಯುವ ಕುಟುಂಬಗಳನ್ನ ಈ ಗಣತಿಯಲ್ಲಿ ಕೈಬಿಡಲಾಗಿದೆ.

ಸಮೀಕ್ಷಾ ಕಾರ್ಯದಲ್ಲಿ ಭೋವಿ ವಡ್ಡರ ಮಣ್ಣು ಮತ್ತು ಕಲ್ಲಿನ ಕೆಲಸವನ್ನೇ ಕೈಬಿಡಲಾಗಿದೆ ಎನ್ನುವ ವಿಚಾರವನ್ನ ಆಯೋಗಕ್ಕೆ ತಿಳಿಸಲು ಸಹ ಸಮೀಕ್ಷೆ ಮುಗಿಯುವವರೆಗೂ ಸರಿಪಡಿಸಿಕೊಳ್ಳಲಿಲ್ಲ. ಸರ್ವೇಯಲ್ಲಿ ಭೋವಿ ವಡ್ಡರನ್ನ ಅತಿ ಹೆಚ್ಚು ನಿರ್ಲಕ್ಷö್ಯ ಮತ್ತು ಕಡೆಗಣನೆ ಮಾಡಿರುವುದರ ಹಿಂದಿನ ಉದ್ದೇಶ ಸರ್ಕಾರವೇ ಉತ್ತರಿಸಬೇಕು.

ಮೀಸಲಾತಿ ವಂಚಿತ ಸಮುದಾಯ ಮೀಸಲಾತಿ ಕೊಡಿ ಎಂದು ಹೋರಾಟ ಮಾಡಲು ನೈತಿಕ ಹಕ್ಕಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಆದರೆ ಮೀಸಲಾತಿ ಇದೇ ಎಂಬ ವಿಚಾರವೇ ತಿಳಿಯದ ಗುಡ್ಡಗಾಡಿನಲ್ಲಿರುವ ಅವಿದ್ಯಾವಂತ, ಅನಾಗರೀಕ, ಶ್ರಮಿಕರಾದ ಭೋವಿ ವಡ್ಡರನ್ನು ಅಧ್ಯಯನಕ್ಕೆ ಆಯೋಗ ಏಕೆ ಒಳಪಡಿಸಲಿಲ್ಲ? ಅವರಿಗೆ ಸ್ವಂತ ಮನೆ, ಗುಡಿಸಲು, ಪಡಿತರ ಚೀಟಿ, ಇದೆಯೇ ಎಂದು ಯಾರು ಪರಿಶೀಲಿಸಬೇಕು? ಆದರೆ ಆಯೋಗದ ವರದಿಯಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಧರ್ಮ, ಜಾತಿ, ಪಂಗಡಗಳು ಮತ್ತು ಪ್ರಾಂತ್ಯಗಳು ಇಂದು ಒಂದಲ್ಲ ಒಂದು ರೀತಿಯಾಗಿ ಮೀಸಲಾತಿ ಸವಲತ್ತನ್ನು ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಹಾಗಾಗಿ ಇಂತಹ ಅನೇಕ ಗೊಂದಲಗಳು ವರದಿಯಲ್ಲಿ ಉಂಟಾಗಿವೆ.

ಜನಗಣತಿ ಅರ್ಜಿಯು ಜನಗಣತಿ ಕಾಯ್ದೆಗೆ ಅನುಗುಣವಾಗಿರಲಿಲ್ಲ, ರಾಜ್ಯ ಸರ್ಕಾರ ಎಸ್.ಸಿ ಅಂಕಿ-ಅಂಶಗಳನ್ನು ಸಂಗ್ರಹಿಸಲು ಸರಿಯಾದ ಸಮಗ್ರ ಸಮೀಕ್ಷಾ ನಮೂನೆಯನ್ನು ಸಿದ್ಧಪಡಿಸಿಲ್ಲ ಮತ್ತು ಮಾತೃ ಜಾತಿಗಳನ್ನು ಸೂಚಿಸುವ ವಿಧಾನದಲ್ಲಿ ಆಯೋಗ ವಿಫಲವಾಗಿದೆ.

ಗಣತಿಗಾಗಿ ಕೇಂದ್ರ ಸರ್ಕಾರದ ಅನುಮತಿ ಪಡೆದು ಜನಗಣತಿ ಕಾಯ್ದೆಯಡಿ ಆಯುಕ್ತರು ಮತ್ತು ಅದರ ನಿರ್ದೇಶಕರನ್ನು ನೇಮಿಸಬೇಕಾಗಿತ್ತು, ಆ ಕಾರ್ಯ ನಡೆಯಲಿಲ್ಲ, ಸಂವಿಧಾನದ ೨೪೬ನೇ ವಿಧಿಯ ಅಡಿಯಲ್ಲಿ ಮತ್ತು ೭ನೇ ಪರಿಚ್ಛೇದದ ಸರಣಿ ಸಂಖ್ಯೆ ೬೯ ರಲ್ಲಿ ಕೇಂದ್ರ ವಿಷಯವಾಗಿದೆ.

ಸುಪ್ರೀಂ ಕೋರ್ಟ್ ತಿಳಿಸಿರುವಂತೆ ಅತೀ ಹಿಂದುಳಿದ ಗುಂಪನ್ನು ವರ್ಗೀಕರಿಸಿ ಆ ಗುಂಪಿಗೆ ವಿಶೇಷ ಸೌಲಭ್ಯವನ್ನು ಕಲ್ಪಿಸುವಂತೆ ಹೇಳಿದ್ದರೂ ಸಹ ಅನಗತ್ಯವಾಗಿ ಗೊಂದಲವನ್ನು ಉಂಟುಮಾಡುವ ಉದ್ದೇಶದಿಂದ ಮತ್ತು ರಾಜಕೀಯ ಪ್ರೇರಿತವಾಗಿ ಸಮುದಾಯಗಳ ಐಕ್ಯತೆಯನ್ನು ಹೊಡೆಯುತ್ತಿರುವುದು ಖಂಡನೀಯವಾಗಿದೆ ಎಂದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon