ಬೆಂಗಳೂರು : ಆರೋಗ್ಯ ಬಂಧು ಯೋಜನೆಗೆ ಸಂಬಂಧಿಸಿದಂತೆ ಪರಿಷ್ಕೃತ ಮಾರ್ಗಸೂಚಿಗಳನ್ನು ಅಳವಡಿಸುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಮೇಲೆ ಓದಲಾದ ಆದೇಶದಲ್ಲಿ, ರಾಜ್ಯದಲ್ಲಿನ ಆಯ್ದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ವಹಣೆಯನ್ನು ಕೆಲವು ಷರತ್ತುಗಳನ್ನು ವಿಧಿಸಿ, ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳಿಗೆ ಮತ್ತು ಸಂಸ್ಥೆ/ ನಿಗಮಗಳಿಗೆ ವಹಿಸಿಕೊಡಲು ಆರೋಗ್ಯ ಬಂಧು ಯೋಜನೆಯನ್ನು ಜಾರಿಗೊಳಿಸಲಾಗಿರುತ್ತದೆ.
ಮೇಲೆ ಕ್ರ.ಸಂ. (2) ರಲ್ಲಿ ಓದಲಾದ ಆದೇಶದಲ್ಲಿ ಡಾ: ನಂಜುಂಡಪ್ಪ ಸಮಿತಿಯಲ್ಲಿ ಗುರುತಿಸಿರುವ 39 ತಾಲ್ಲೂಕುಗಳಲ್ಲಿನ ಎಲ್ಲಾ ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 2008ರ ಆರೋಗ್ಯ ಬಂಧು ಮಾರ್ಗಸೂಚಿಗಳನ್ವಯ ಖಾಸಗಿ ಸಂಸ್ಥೆಗಳು, ವೈದ್ಯಕೀಯ ಮಹಾವಿದ್ಯಾಲಯಗಳಿಗೆ ವಹಿಸಲು ಆದೇಶಿಸಲಾಗಿದೆ.
ಮೇಲೆ ಕ್ರ.ಸಂ. (3) ರಲ್ಲಿ ಓದಲಾದ ಆದೇಶದಲ್ಲಿ ರಾಜ್ಯದ ಇತರೆ ತಾಲ್ಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಬಂಧು ಯೋಜನೆಗೆ ಒಳಪಡಿಸಲಾಗಿದೆ.
ಮೇಲೆ ಕ್ರ.ಸಂ.(4) ರಲ್ಲಿ ಓದಲಾದ ಆದೇಶದಲ್ಲಿ, ಆರೋಗ್ಯ ಬಂಧು ಯೋಜನೆಯಡಿಯಲ್ಲಿನ ಒಟ್ಟು 52 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 27 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅವಧಿ ಪೂರ್ಣಗೊಂಡದ್ದು, ಅವಧಿ ಪೂರ್ಣಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸರ್ಕಾರದ ವಶಕ್ಕೆ ಕೂಡಲೇ ಹಿಂಪಡೆದು, ಉಳಿದ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅವಧಿ ಪೂರ್ಣಗೊಂಡ ನಂತರ ಇಲಾಖೆ ವಶಕ್ಕೆ ಪಡೆಯಲು ಹಾಗೂ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು/ಸಮುದಾಯ ಆರೋಗ್ಯ ಕೇಂದ್ರಗಳನ್ನು ಸರ್ಕಾರೇತರ ಸಂಸ್ಥೆಗಳಿಗೆ ಆರೋಗ್ಯ ಬಂಧು ಯೋಜನೆಯಡಿ ನೀಡುವಾಗ ಪರಿಷ್ಕೃತ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಪರಿಷ್ಕೃತ ಒಡಂಬಡಿಕೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದಲ್ಲಿ ಅನುಮೋದನೆ ಪಡೆಯಲು ಆದೇಶಿಸಲಾಗಿದೆ.
ಮೇಲೆ ಕ್ರ.ಸಂ. (6) ರಲ್ಲಿ ಓದಲಾದ ಏಕಕಡತದಲ್ಲಿ ಆರೋಗ್ಯ ಬಂಧು ಯೋಜನೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳ ಬದಲಾವಣೆಗಳೊಂದಿಗೆ Revised Arogya Bhandu ಮಾರ್ಗಸೂಚಿ 2024-25 ಅನುಮೋದನೆಗಾಗಿ ಆಯುಕ್ತರು, ಆಕುಕ ಸೇವೆಗಳು ಇವರಿಂದ ಸ್ವೀಕೃತವಾಗಿದೆ.
ಆಯುಕ್ತರು, ಆಕುಕ ಸೇವೆಗಳು ಇವರಿಂದ ಸ್ವೀಕೃತವಾದ ಏಕಕಡತದಲ್ಲಿ ಸ್ವೀಕೃತವಾದ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಆರೋಗ್ಯ ಬಂಧು ಯೋಜನೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಕೆಳಕಂಡ ಪ್ರಮುಖ ಅಂಶಗಳು ಪರಿಷ್ಕೃತ ಆರೋಗ್ಯ ಬಂಧು ಯೋಜನೆ ಮಾರ್ಗಸೂಚಿಗಳನ್ನು ಒಳಗೊಳ್ಳುವುದು ಸೂಕ್ತವೆಂದು ಸರ್ಕಾರವು ತೀರ್ಮಾನಿಸಿದೆ.