ಬಿಗ್ ಬಾಸ್ ಮನೆಯೊಳಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ರಿಷಾ ಗೌಡ ಇದೀಗ ಸಿಕ್ಕಾಪಟ್ಟೆ ವೈಲ್ಡ್ ಆಗಿದ್ದಾರೆ. ಗಿಲ್ಲಿ ನಟ ಜೊತೆ ರಿಷಾ ಗೌಡ ಜೋರಾಗಿ ಜಗಳ ಆಡಿದ್ದಾರೆ.
ಅಷ್ಟೇ ಅಲ್ಲ, ಸಿಟ್ಟಿನಲ್ಲಿ ಗಿಲ್ಲಿ ನಟನಿಗೆ ಹೊಡೆದಿದ್ದಾರೆ, ತಳ್ಳಿದ್ದಾರೆ. ‘ಬಿಗ್ ಬಾಸ್’ ರೂಲ್ಸ್ ಪ್ರಕಾರ, ಯಾರೂ ಯಾರ ಮೇಲೂ ಕೈಮಾಡುವಂತಿಲ್ಲ. ಈ ನಿಯಮದ ಅನುಸಾರ ರಿಷಾ ಎಲಿಮಿನೇಟ್ ಆಗ್ತಾರಾ? ರಿಷಾ ಅವರ ಬಳಿ ಬಕೆಟ್ ಕೊಡುವಂತೆ ಗಿಲ್ಲಿ ಅವರು ಬಾತ್ರೂಂನಲ್ಲಿ ಮನವಿ ಮಾಡಿದ್ದಾರೆ.
ಆದರೆ, ರಿಷಾ ಇದಕ್ಕೆ ಬಗ್ಗಲಿಲ್ಲ. ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ ಎಂದು ಹೊರಟ ಗಿಲ್ಲಿ ಅವರು, ರಿಷಾ ಅವರ ಬಟ್ಟೆಯನ್ನು ತಂದು ಬಾತ್ರೂಂ ಹೊರ ಭಾಗದಲ್ಲಿರುವ ನೆಲದ ಮೇಲೆ ಹಾಕಿದ್ದಾರೆ.
ಇದು ರಿಷಾ ಕೋಪಕ್ಕೆ ಕಾರಣ ಆಗಿದೆ. ‘ಗಿಲ್ಲಿ’ ಎಂದು ಕೂಗುತ್ತಾ ಬಂದ ಅವರು, ಗಿಲ್ಲಿಗೆ ಹೊಡೆದಿದ್ದಾರೆ. ಇಷ್ಟಕ್ಕೆ ರಿಷಾ ನಿಲ್ಲಲಿಲ್ಲ. ರಿಷಾ ಅವರು ಗಿಲ್ಲಿ ಮೇಲೆ ಕೂಗಾಡಿದ್ದಾರೆ. ಗಿಲ್ಲಿ ಬಟ್ಟೆಗಳನ್ನೆಲ್ಲ ಎತ್ತಿ ಬೀಸಾಕಿದ್ದಾರೆ. ಸೂಟ್ಕೇಸ್ನ ಒದ್ದಿದ್ದಾರೆ ಆ ಬಳಿಕ ಗಿಲ್ಲಿಯನ್ನು ತಳ್ಳಿದ್ದಾರೆ.
ರಿಷಾ ಮಾಡಿದ್ದು ಬಿಗ್ ಬಾಸ್ ಮೂಲ ನಿಯಮಗಳಿಗೆ ವಿರುದ್ಧವಾಗಿದೆ

































