ಪಂಜಾಬ್ : ಕೆಲವರು ಕಷ್ಟವನ್ನು ಅನುಭವಿಸುತ್ತಿದ್ದೇವೆ ಎಂದು ಕುಗ್ಗದೇ, ಮತ್ತಷ್ಟು ಗಟ್ಟಿಯಾಗುತ್ತಾರೆ. ಹೀಗೆ ಎಷ್ಟೇ ಕಷ್ಟವನ್ನು ಅನುಭವಿಸುತ್ತಿದ್ದರೂ ಕುಗ್ಗದೇ ತಮ್ಮ ಗುರಿಯನ್ನು ಸಾಧಿಸಿದ ಐಎಎಸ್ ಅಧಿಕಾರಿ ರಿತಿಕಾ ಜಿಂದಾಲ್ ಅವರ ಸ್ಫೂರ್ತಿದಾಯಕ ಕತೆ ಇದು.
ರಿತಿಕಾ ಜಿಂದಾಲ್ ಅವರು ಮೂಲತಃ ಪಂಜಾಬ್‌ನ ಮೊಗಾ ನಗರದವರು. ರಿತಿಕಾ ಅವರು 12 ನೇ ತರಗತಿ ಸಿಬಿಎಸ್ ಸಿ ಬೋರ್ಡ್ ಪರೀಕ್ಷೆಯಲ್ಲಿ ಇಡೀ ಉತ್ತರ ಭಾರತದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಟಾಪರ್ ಆಗಿ ಹೊರಹೊಮ್ಮಿದರು. ಬಳಿಕ ದೆಹಲಿಯ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ವ್ಯಾಸಂಗ ಮಾಡಿದರು. ಅವರು ತಮ್ಮ ಪದವಿಯ 3ನೇ ವರ್ಷದಲ್ಲಿ ಯುಪಿಎಸ್ ಸಿಗೆ ತಯಾರಿ ಆರಂಭಿಸಿದರು.
ಆದರೆ ದುರದೃಷ್ಟವಶಾತ್, ರಿತಿಕಾ ಅವರು ಯುಪಿಎಸ್ ಸಿ ಪರೀಕ್ಷೆಗಾಗಿ ತಯಾರಿ ನಡೆಸುತ್ತಿರುವ ಸಂದರ್ಭದಲ್ಲಿ ಅವರ ತಂದೆಗೆ ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್ ಇರುವುದು ಗೊತ್ತಾಗುತ್ತದೆ. ಆದರೂ ಕೂಡ ರಿತಿಕಾ ಅವರು ಆತ್ಪತ್ರೆಯಲ್ಲಿ ತನ್ನ ತಂದೆಯನ್ನು ನೋಡಿಕೊಳ್ಳುತ್ತಾ ತನ್ನ ಅಧ್ಯಯನವನ್ನು ಮುಂದುವರೆಸುತ್ತಾರೆ.
ರಿತಿಕಾ ಅವರು ತಮ್ಮ ಮೊದಲ ಪ್ರಯತ್ನದಲ್ಲಿ ವಿಫಲರಾಗುತ್ತಾರೆ. ನಂತರ 2019 ರಲ್ಲಿ 2ನೇ ಬಾರಿಗೆ ಪರೀಕ್ಷೆ ಬರೆದ ರಿತಿಕಾ ಅವರು 88 ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ ಕೇವಲ 22ನೇ ವಯಸ್ಸಿಗೆ ಯುಪಿಎಸ್ ಸಿ ಪರೀಕ್ಷೆ ಬರೆದು ಉತ್ತೀರ್ಣರಾಗುತ್ತಾರೆ. ಆದರೆ ರಿತಿಕಾ ಅವರು ಐಎಎಸ್ ತರಬೇತಿ ಪಡೆಯುವ ವೇಳೆಯಲ್ಲಿ ಆಕೆಯ ಪೋಷಕರಿಬ್ಬರೂ ನಿಧನರಾಗುತ್ತಾರೆ. ಆದರೆ ಛಲ ಬಿಡದೆ ರಿತಿಕಾ ಅವರು ಐಎಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾಗುತ್ತಾರೆ. ಪ್ರಸ್ತುತ, ಅವರು ಹಿಮಾಚಲ ಪ್ರದೇಶದ ಪಾಂಗಿಯಲ್ಲಿ ರೆಸಿಡೆಂಟ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.