ನವದೆಹಲಿ : ರಾಜಸ್ಥಾನದ ಐಎಎಸ್ ಅಧಿಕಾರಿಯೊಬ್ಬರು ಕೆಲ ದಿನಗಳಿಂದ ವಿಶೇಷ ಕಾರಣಕ್ಕಾಗಿ ಚರ್ಚೆಯಲ್ಲಿದ್ದಾರೆ. ಈ ಮಹಿಳಾ ಅಧಿಕಾರಿ ಇತ್ತೀಚಿನ ದಿನಗಳಲ್ಲಿ ವಿಶೇಷ ವ್ಯಕ್ತಿಗಳಿಗೆ ಸ್ಕೂಟಿಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಆ ಐಎಎಸ್ ಅಧಿಕಾರಿಯ ಹೆಸರು ರಿಯಾ ದಾಬಿ. ಇಂದು ನಾವು ಯುಪಿಎಸ್ ಸಿ ಪರೀಕ್ಷಾ ಸಾಧಕರ ಪಟ್ಟಿಯಲ್ಲಿ ರಾಜಸ್ಥಾನದ ಐಎಎಸ್ ಅಧಿಕಾರಿ ರಿಯಾ ದಾಬಿ ಬಗ್ಗೆ ತಿಳಿಯೋಣ ಬನ್ನಿ.
ರಾಜಸ್ಥಾನ ಮೂಲದ ರಿಯಾ ದಾಬಿ. ಐಎಎಸ್ ರಿಯಾ ದಾಬಿ ಜೈಸಲ್ಮೇರ್ ಕಲೆಕ್ಟರ್ ಟೀನಾ ದಾಬಿ ಅವರ ಸಹೋದರಿ. ಪ್ರಸ್ತುತ ಅಲ್ವಾರ್ನ ಡೆಪ್ಯೂಟಿ ಕಲೆಕ್ಟರ್ ಆಗಿದ್ದಾರೆ. ರಾಜ್ಯ ಸರ್ಕಾರದ ಸ್ಕೂಟಿ ವಿತರಣಾ ಯೋಜನೆಯಡಿ ರಿಯಾ ದಾಬಿ ಅವರು ಕೆಲ ದಿನಗಳ ಹಿಂದೆ ವಿಕಲಚೇತನರಿಗೆ ಸ್ಕೂಟಿ ವಿತರಿಸಿ ಚರ್ಚೆಯಲ್ಲಿದ್ದರು. ರಾಜಸ್ಥಾನ ಸರ್ಕಾರವು ಪ್ರತಿ ವರ್ಷ 5000 ದಿವ್ಯಾಂಗರಿಗೆ ಸ್ಕೂಟಿಗಳನ್ನು ವಿತರಿಸುವ ಗುರಿಯನ್ನು ಹೊಂದಿತ್ತು. ರಿಯಾ ದಾಬಿ ಕೂಡ ಸರ್ಕಾರದ ಗುರಿ ಮುಟ್ಟಲು ಶ್ರಮಿಸುತ್ತಿದ್ದಾರೆ.
ರಾಜಸ್ಥಾನ ಕೇಡರ್ ನ ಐಎಎಸ್ ಅಧಿಕಾರಿಗಳಾದ ದಾಬಿ ಸಹೋದರಿಯರು ಯುವಜನತೆಗೆ ಯೂತ್ ಐಕಾನ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರಿಗೂ ಲಕ್ಷಗಟ್ಟಲೆ ಫಾಲೋವರ್ಸ್ ಇದ್ದಾರೆ.ಟೀನಾ ದಾಬಿ ಮತ್ತು ರಿಯಾ ದಾಬಿ Instagram ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾದ ನಂತರವೇ ರಿಯಾ ದಾಬಿ ಐಎಎಸ್ ಆದರು. ಅವರು ಅಖಿಲ ಭಾರತ 15 ನೇ ರ್‍ಯಾಂಕ್ ಪಡೆದರು. ಈ ಸಮಯದಲ್ಲಿ ಅವರ ವಯಸ್ಸು ಕೇವಲ 24 ವರ್ಷಗಳು.