ಹಾಸನ: ಹಾಸನದಲ್ಲಿರುವ ಲಕ್ಷ್ಮಮ್ಮ ಜಾಗದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ ಕಾಂಪೌಂಡ್ ನ್ನು ತೆರವು ಮಾಡಲಾಗಿದೆ.
ಹಾಸನದ ವಿದ್ಯಾನಗರದಲ್ಲಿರುವ ಲಕ್ಷ್ಮಮ್ಮ ಜಾಗದಲ್ಲಿ ನಟ ಯಶ್ ತಾಯಿ ಪುಷ್ಪಾ ಅವರಿಗೆ ಸೇರಿದ ಮನೆ ನಿರ್ಮಿಸಲಾಗಿತ್ತು. ಮನೆಯ ಸುತ್ತಲು 1500 ಅಡಿಗಳಷ್ಟು ಅಕ್ರಮವಾಗಿ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ ಎಂದು ಜಾಗದ ಮಾಲೀಕರು ಆರೋಪಿಸಿದ್ದರು. ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.
ಇದೀಗ ಕೋರ್ಟ್ ಆದೇಶದ ಮೇರೆಗೆ ಕೋರ್ಟ್ ನಿಂದ ಅನುಮತಿ ಪಡೆದು ಲಕ್ಷ್ಮ್ಮಮ್ಮ ಜಾಗದಲ್ಲಿ ನಿರ್ಮಿಸಿಇದ್ದ ಅಕ್ರಮ ಕಾಂಪೌಂಡ್ ಗಳನ್ನು ಜೆಸಿಬಿ ಮೂಲಕವಾಗಿ ತೆರವುಗೊಳಿಸಲಾಗಿದೆ. ಅಧಿಕಾರಿಗಳ ಸಮ್ಮುಖದಲ್ಲಿ ಇಂದು ಬೆಳಂಬೆಳಿಗ್ಗೆ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಾಂಪೌಂಡ್ ಗಳನ್ನು ಕೆಡವಲಾಯಿತು.
































