ಚಿತ್ರದುರ್ಗ : ರೋಟರಿ ಬಾಲಭವನದಲ್ಲಿ ಇತ್ತೀಚೆಗೆ ಶಿಕ್ಷಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ರೋಟರಿ ಕ್ಲಬ್ ಚಿನ್ಮುಲಾದ್ರಿ ಅಧ್ಯಕ್ಷರಾದ ರೊ.ದಿಲ್ಶಾದ್ ಉನ್ನಿಸ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಡಾ.ಸರ್ವಪಲ್ಲಿ ರಾಧಾಕೃಷ್ಣನ್ರವರ ಹುಟ್ಟುಹಬ್ಬವನ್ನು ಪ್ರತಿ ವರ್ಷ ಸೆ.5 ರಂದು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಶಿಕ್ಷಕ ವೃತ್ತಿಯಿಂದ ದೇಶದ ಸರ್ವೋನ್ನತ ರಾಷ್ಟ್ರಪತಿ ಹುದ್ದೆಯನ್ನೇರಿದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ರವರ ಆದರ್ಶಗಳನ್ನು ಪ್ರತಿಯೊಬ್ಬ ಶಿಕ್ಷಕರು ಮೈಗೂಡಿಸಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ಗಟ್ಟಿ ಸಮಾರಂಭ ಉದ್ಗಾಟಿಸಿ ಮಾತನಾಡುತ್ತ ರೋಟರಿ ಕ್ಲಬ್ ಚಿನ್ಮೂಲಾದ್ರಿ ಶಿಕ್ಷಕರ ದಿನಾಚರಣೆ ಆಚರಿಸುವ ಮೂಲಕ ಶಿಕ್ಷಕರುಗಳನ್ನು ಸನ್ಮಾನಿಸಿ ಪ್ರಶಸ್ತಿ ನೀಡುತ್ತಿರುವುದು ನಿಜಕ್ಕೂ ಗುರುಗಳನ್ನು ಗೌರವಿಸಿದಂತಾಗಿದೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ರವರ ಜನ್ಮದಿನವನ್ನು ಪ್ರತಿ ವರ್ಷವೂ ಸೆ. 5 ರಂದು ಶಿಕ್ಷಕರ
ದಿನಾಚರಣೆಯನ್ನಾಗಿ ಆಚರಿಸುತ್ತಿರುವುದು ಅರ್ಥಪೂರ್ಣ ಎಂದು ಹೇಳಿದರು.
ಸೈಯದ್ ಸ್ವಾಲೇಹ, ಅಡ್ವೆಂಚರ್ ಸ್ಪೋಟ್ರ್ಸ್ ತರಬೇತುದಾರ ನ್ಯಾಯವಾದಿ ಬಿ.ಟಿ.ಬಸವರಾಜು, ಶಿಕ್ಷಕಿ ನಸೀಮ್ ಉನ್ನಿಸಾ, ದೈಹಿಕ ಶಿಕ್ಷಕ ಬೋರನಾಯ್ಕ ಇವರುಗಳನ್ನು
ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಚಿನ್ಮೂಲಾದ್ರಿ ಉಪಾಧ್ಯಕ್ಷ ರೊ.ಗುರುಮೂರ್ತಿ ಎಸ್.ವಿ. ಕಾರ್ಯದರ್ಶಿ ಅಮೃತ ಸಂತೋಷ್ ಇವರುಗಳು ವೇದಿಕೆಯಲ್ಲಿದ್ದರು.