ಚಿತ್ರದುರ್ಗ : ರೋಟರಿ ಕ್ಲಬ್ ಸೇವಾ ಸಂಸ್ಥೆಯಾಗಿದ್ದು ಬಡವರ ಸಮಸ್ಯೆಯನ್ನು ಅರಿತು ಅದನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಮುಂದಾಗುವಂತೆ ನೂತನ ಕ್ಲಬ್ನ ಪದಾಧಿಕಾರಿಗಳಿಗೆ ೩೧೭೦ ಜಿಲ್ಲೆಯ ರೋ.ಪಿಡಿಜಿ ಅವಿನಾಶ್ ಪೂದ್ದಾರ್ ಕರೆ ನೀಡಿದರು.
ನಗರದ ಎಸ್.ಆರ್.ಬಿ.ಎಂ.ಎಸ್. ರೋಟರಿ ಬಾಲ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರೋಟರಿಕ್ಲಬ್ ಚಿತ್ರದುರ್ಗ ೩೧೬೦ರ ೨೦೨೩-೨೪ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಗೌಪ್ಯತೆಯ ಪ್ರಮಾಣವನ್ನು ಭೋಧಿಸಿ ಮಾತನಾಡಿ, ಅಧಿಕಾರ ಬರುತ್ತದೆ ಹೋಗುತ್ತದೆ. ಆದರೆ ಇದ್ಧಾಗ ಮಾತ್ರ ಬಡವರ ಸೇವೆಯನ್ನು ಮಾಡುವುದರ ಮೂಲಕ ಅವರ ಸೇವೆಗೆ ಪಾತ್ರರಾಗಬೇಕಿದೆ. ಅವರಿಗೆ ನೀವು ಮಾಡಿದ ಸೇವೆ ಶಾಶ್ವತವಾಗಿರಬೇಕಿದೆ ಆಗ ಮಾತ್ರ ನಿಮ್ಮ ನೆನಪು ಇರಲು ಸಾಧ್ಯವಿದೆ ಎಂದರು.
ರೋಟರಿ ಕ್ಲಬ್ನ ಸದಸ್ಯರು ನೀಡಿದ ಸಲಹೆ, ಸೂಚನೆಯನ್ನು ಸ್ವೀಕಾರ ಮಾಡಿ ಅದನ್ನು ಸಾಧ್ಯವಾದಷ್ಟು ಬಳಕೆ ಮಾಡಿಕೊಳ್ಳಿ, ಎಲ್ಲರನ್ನು ಸಮಾನವಾಗಿ ನೋಡಿ ಯಾರನ್ನು ಸಹಾ ಕೀಳಾಗಿ ಕಾಣಬೇಡಿ, ಬಡವರ ಸೇವೆಯನ್ನು ಮಾಡುವುದರ ಮೂಲಕ ಸಂತೋಷವನ್ನು ಕಂಡುಕೊಳ್ಳಿ, ರೋಟರಿ ಕ್ಲಬ್ ಸೇವಾ ಕೇಂದ್ರವಾಗಿದೆ ಇಲ್ಲಿ ಬರುವ ಬಡವರಿಗೆ ನಿಮ್ಮ ಕೈಲಾದ ಸೇವೆಯನ್ನು ಮಾಡಿ ಇದರಿಂದ ನಿಮ್ಮಗೆ ಸಂತೋಷವನ್ನು ಕಂಡುಕೊಳ್ಳಲು ಸಾಧ್ಯವಿದೆ.ಈ ಸಂಸ್ಥೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಉತ್ತಮವಾದ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳು ಸಾಧ್ಯವಿದೆ ಎಂದು ರೋ.ಪಿಡಿಜಿ ಅವಿನಾಶ್ ಪೂದ್ದಾರ್ ತಿಳಿಸಿದರು.
ಪಿಎಚ್.ಎಫ್.ಮಹಾನಂದಿ ಸುರೇಶ್ ,ರೋಟರಿಕ್ಲಬ್ ಚಿತ್ರದುರ್ಗ ೩೧೬೦ರ ೨೦೨೩-೨೪ನೇ ಸಾಲಿಗೆ ಅಧ್ಯಕ್ಷರಾದ ಬಿ.ಎಸ್.ಕನಕರಾಜು ,ರೋಟರಿಕ್ಲಬ್ ಚಿತ್ರದುರ್ಗ ೩೧೬೦ರ ೨೦೨೩-೨೪ನೇ ಸಾಲಿನ ಕಾರ್ಯದರ್ಶಿ ವಿಕ್ರಾಂತ್ ಜೈನ್, ಹಿಂದಿನ ಅಧ್ಯಕ್ಷರಾದ ಶ್ರೀಮತಿ ಮಾಧುರಿ ಮಧುಪ್ರಸಾದ್, ಕಾರ್ಯದರ್ಶಿ ಶ್ರೀಮತಿ ಜಯಶ್ರೀ ಷಾ, ಚಿನ್ಮೂಲಾದ್ರಿ ಜೋನ್ನ ಅಸಿಸೆಂಟ್ ಗೌರ್ನರ್ ಉಮೇಶ್ ತೊಪ್ಪದ್, ಪಿಡಿಜಿ ಕೆ.ಮಧುಪ್ರಸಾದ್ ಹಾಗೂ ಪಿ.ಎಚ್.ಎಫ್. ಎಂ.ಕೆ.ರವೀಂದ್ರ ಭಾಗವಹಿಸಿದ್ದರು.