ಚೆನ್ನೈ : ತಮಿಳುನಾಡಿನ ದೇವಸ್ಥಾನದ ಪಟ್ಟಣ ತಿರುವಣ್ಣಾಮಲೈನಲ್ಲಿ 2ನೇ ಭೂಕುಸಿತ ಸಂಭವಿಸಿದೆ. ಮೊದಲನೇ ಭೂಕುಸಿತದಲ್ಲಿ ವಸತಿ ಕಟ್ಟಡದ ಮೇಲೆ ಬಂಡೆಯೊಂದು ಕುಸಿದು ಬಿದ್ದ ಪರಿಣಾಮ ಒಂದೇ ಕುಟುಂಬದ 7 ಮಂದಿ ಸಾವನ್ನಪ್ಪಿದ್ದರು.
ಭಾರೀ ಮಳೆಯಿಂದಾಗಿ ಪ್ರಸಿದ್ಧ ಅಣ್ಣಾಮಲೈಯಾರ್ ಬೆಟ್ಟದ ಕೆಳಗಿನ ಇಳಿಜಾರುಗಳಲ್ಲಿ ಭಾನುವಾರ ಸಂಜೆ 4:30ಕ್ಕೆ ಈ ಅವಘಡ ಸಂಭವಿಸಿತ್ತು. ಚೆನ್ನೈನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತಜ್ಞರ ತಂಡವು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಆದರೆ, ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ. 2ನೇ ಭೂಕುಸಿತ ಸ್ಥಳೀಯ ದೇವಸ್ಥಾನದ ಬಳಿಯ ಸ್ಥಳದಲ್ಲಿ ನಡೆದಿದೆ.
ತಿರುವಣ್ಣಾಮಲ್ಲೈನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಮಿಳುನಾಡು ಸರ್ಕಾರ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.