ಚಿತ್ರದುರ್ಗ:ಆರ್.ಎಸ್.ಎಸ್. ಬ್ಯಾನ್ ಮಾಡುವ ಮಾತು ಅಸಾಧ್ಯ ಆರ್ ಎಸ್ ಎಸ್ ಬ್ಯಾನ್ ಕಲ್ಪನೆ ಮೂರ್ಖತನದ ಪರಮಾವಧಿ ಎಂದು ಬಿಜೆಪಿ ರಾಜ್ಯದ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದಲ್ಲಿ ಅತಿವೃಷ್ಠಿಯಿಂದ ರೈತರ ಪರದಾಡುತ್ತಿದ್ದಾರೆ. ಪ್ರಿಯಾಂಕ ಖರ್ಗೆ ಬಿಟ್ಟಿ ಪ್ರಚಾರಕ್ಕಾಗಿ ಗಿಮಿಕ್ಗಳನ್ನು ಬಿಡಲಿ ಬೆದರಿಕೆ ಕರೆ ಬರುತ್ತಿದೆ ಎಂಬ ಅನವಶ್ಯಕ ಮಾತು ಬಿಡಲಿ ಪ್ರಿಯಾಂಕ ಖರ್ಗೆ ತಮ್ಮ ಖಾತೆಯ ಅಭಿವೃದ್ಧಿ ಬಗ್ಗೆ ಮಾತಾಡಲಿ ಎಂದಿದ್ಧಾರೆ.
ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗದೆ ಶಾಸಕರಲ್ಲಿ ಹತಾಶೆ ವಿಪಕ್ಷ ಶಾಸಕರಿಗೆ 25ಕೋಟಿ, ಕೈ ಶಾಸಕರಿಗೆ 50ಕೋಟಿ ಅನುದಾನ ವಿಚಾರ ಕೇವಲ ಹಾಳೆಯ ಮೇಲೆ ಮಾತ್ರ ಬರೆದಂತಾಗಿದೆ ಅನುದಾನದ ನೀಡದ ಬಗ್ಗೆ ಕೈ ಶಾಸಕರೇ ಬಹಿರಂಗವಾಗಿ ಹೇಳಿದ್ದಾರೆ ನಾವು ಸದನದ ಒಳಗೆ, ಹೊರಗೆ ಅನೇಕ ಸಲ ಅನುದಾನಕ್ಕೆ ಆಗ್ರಹಿಸಿದ್ದೇವೆ ಈಗಲಾದರೂ ಸರ್ಕಾರ ಎಲ್ಲಾ ಕ್ಷೇತ್ರಕ್ಕೂ ಸಮಾನ ಅನುದಾನ ನೀಡಲಿ ಸಚಿವರು ಇಲಾಖೆಯಲ್ಲಿ ಏನು ಕಡೆದು ಕಟ್ಟೆ ಹಾಕಿದ್ದಾರೆ ತಿಳಿಸಲಿ ಎಂದು ಬಿಜೆಪಿ ರಾಜ್ಯದ್ಯಕ್ಷ ಬಿ ವೈ ವಿಜಯೇಂದ್ರ ಸಚಿವರಾದ ಪ್ರಿಯಾಂಕ ಖರ್ಗೆಯವರಿಗೆ ಸವಾಲ್ ಹಾಕಿದ್ದಾರೆ.
ಸಚಿವ ಪ್ರಿಯಾಂಕ ಖರ್ಗೆಗೆ ಗೌರವಯುತವಾಗಿ ಹೇಳುತ್ತೇನೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ ಇಲಾಖೆಯ ಅಭಿವೃದ್ಧಿ ಬಗ್ಗೆ ಜನರ ಮುಂದೆ ಬಿಚ್ಚಿಡುವ ಕೆಲಸ ಮಾಡಿ ಐದಾರು ದಶಕದಿಂದ ಕಲಬುರಗಿ ಖರ್ಗೆ ಕುಟುಂಬದ ಹಿಡಿತದಲ್ಲಿದೆ ಕಲಬುರಗಿ ಜಿಲ್ಲೆಯಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿದ್ದೀರಿರಾಜ್ಯದಲ್ಲಿ ಕಲಬುರಗಿ ಶಿಕ್ಷಣದಲ್ಲಿ ಏಕೆ ಕೊನ ಸ್ಥಾನದಲ್ಲಿ ಉಳಿದಿದೆರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ಮುಚ್ಚಿಹಾಕಲು ಈರೀತಿ ಯತ್ನವಿಷಯ ಡೈವರ್ಟ್ ಮಾಡಲು ಈರೀತಿ ವಿಚಾರ ಮುನ್ನೆಲೆಗೆ ತರ್ತಿದ್ದಾರೆಖSS ಮುಟ್ಟುವ ಯೋಗ್ಯತೆಯೂ ಇವರಿಗೆ ಇಲ್ಲ ಆರ್ ಎಸ್ ಎಸ್ ಬ್ಯಾನ್ ಮಾಡುವಂಥದ್ದು ಅಸಾಧ್ಯ ಖರ್ಗೆ ಪ್ರಚಾರ ಗಿಟ್ಟಿಸಿಕೊಳ್ಳುವ ಕೆಲಸ ಮಾಡ್ತಿದ್ದಾರೆ
ಈ ಸಂದರ್ಭದಲ್ಲಿ ಸಂಸದರಾದ ಗೋವಿಂದ ಕಾರಜೋಳ, ಶಿವಮೊಗ್ಗ ಸಂಸದರಾದ ರಾಘವೇಂದ್ರ, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ, ಮಧುಗಿರಿ ಅಧ್ಯಕ್ಷ ಹನುಮಂತೇಗೌಡ, ಪ್ರಧಾನ ಕಾರ್ಯದರ್ಶಿ ಸಿದ್ದಾಪುರದ ಸುರೇಶ್, ಮಂಡಲ ಅಧ್ಯಕ್ಷ ನಾಗರಾಜ್, ಸೇರಿದಂತೆ ಇತರರು ಭಾಗವಹಿಸಿದ್ದರು.