ಚಿತ್ರದುರ್ಗ: ನಗರದ ಚಿಕ್ಕಪೇಟೆಯಲ್ಲಿನ ಐಯ್ಯಣ್ಣನ ಪೇಟೆಯಲ್ಲಿರುವ ಈಶ್ವರ ದೇವಸ್ಥಾನದಲ್ಲಿ ಕಾರ್ತಿಕದ ಅಂಗವಾಗಿ ಭಾನುವಾರ ಸ್ವಾಮಿಯ ರುದ್ರಾಭೀಷೇಕ ಕಾರ್ಯಕ್ರಮವನ್ನು ನಡೆಸಲಾಯಿತು.
ಇಂದು ಬೆಳಿಗ್ಗೆಯಿಂದಲೇ ಸ್ವಾಮಿಯ ರುದ್ರಾಭೀಷೇಕ ಕಾರ್ಯವನ್ನು ನೇರವೇರಿಸಲಾಯಿತು. ಈ ಸಮಯದಲ್ಲಿ ಮಹಿಳೆಯರು ಗಂಗಾ ಪೂಜೆಯನ್ನು ನೇರವೇರಿಸಿ, ಕುಂಭಗಳೊಂದಿಗೆ ರುದ್ರಾಭೀಷೇಕಕ್ಕೆ ಗಂಗೆಯನ್ನು ತರಲಾಯಿತು. ಈ ಸಂದರ್ಭದಲ್ಲಿ ಭಕ್ತಾಧಿಗಳು ಆಗಮಿಸಿ ಸ್ವಾಮಿಯ ದರ್ಶನವನ್ನು ಪಡೆದು ಪುನೀತರಾದರು.
ಡಿ.2ರ ಸೋಮವಾರ ಸಂಜೆ 8 ಗಂಟೆಗೆ ಸ್ವಾಮಿಯ ಕಡೇ ಕಾರ್ತಿಕೋತ್ಸವವನ್ನು ಮಹಾ ಮಂಗಳಾರತಿಯೊಂದಿಗೆ ಹಮ್ಮಿಕೊಂಡಿದ್ದು ಇದರಲ್ಲಿ ಸರ್ವ ಭಕ್ತಾಧಿಗಳು ಭಾಗವಹಿಸುವುದರ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಸಮಿತಿಯವರು ಕೋರಿದ್ದಾರೆ