ಶಬರಿಮಲೆ : ಶಬರಿಮಲೆಯಲ್ಲಿ ಈ ಬಾರಿಯ ಮಂಡಲ ಮಹೋತ್ಸವಕ್ಕೆ ಸಿದ್ಧತೆ ಶುರುವಾಗಿದ್ದು, ಈಗಾಗಲೇ ಭಕ್ತರು ಮಾಲೆ ಧರಿಸಿ ವ್ರತಾಚರಣೆ ಶುರು ಮಾಡಿದ್ದಾರೆ. ಅಯ್ಯಪ್ಪನ ದರ್ಶನಕ್ಕಾಗಿ ಶಬರಿಮಲೆ ಶ್ರೀ ಧರ್ಮಶಾಸ್ತ್ರಾ ದೇವಸ್ಥಾನದ ಗರ್ಭಗುಡಿಯ ಬಾಗಿಲು ನ.17ರಂದು ತೆರೆಯಲಿದೆ. ಡಿ.27ರಂದು ಮಂಡಲ ಪೂಜೆ ನಡೆಯಲಿದ್ದು, 2026ರ ಜ.14ರಂದು ಮಕರ ಸಂಕ್ರಮಣ ಮಹೋತ್ಸವ ನಡೆಯಲಿದೆ.
ಶಬರಿಮಲೆ ಮಂಡಲ ಮಹೋತ್ಸವಕ್ಕೆ ಆನ್‌ಲೈನ್ ಬುಕ್ಕಿಂಗ್ ಆರಂಭಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 70 ಸಾವಿರ ಯಾತ್ರಿಕರಿಗೆ ಬುಕ್ಕಿಂಗ್ ವ್ಯವಸ್ಥೆ ಇದೆ. ವೆಬ್‌ಸೈಟ್ ಮೂಲಕ ಬುಕ್ಕಿಂಗ್ ಮಾಡಬಹುದು. ಅದಲ್ಲದೆ 20 ಸಾವಿರ ಮಂದಿಗೆ ಸ್ಪಾಟ್ ಬುಕ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಭಕ್ತರಿಗೆ ಅನುಕೂಲವಾಗುವಂತೆ ಸಕಲ ವ್ಯವಸ್ಥೆಯನ್ನು ಮಾಡುವುದಾಗಿ ದೇವಸ್ವಂ ಬೋರ್ಡ್ ಹೇಳಿದೆ.

































