ಚೆನ್ನೈ :ಫಿದಾ ಬೆಡಗಿ ಸಾಯಿ ಪಲ್ಲವಿ ಸೌತ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.ಶಿವಕಾರ್ತಿಕೇಯನ್ ಜೊತೆಗಿನ ‘ಅಮರನ್’ಸಿನಿಮಾ ಸಕ್ಸಸ್ ಕಂಡ ನಂತರ ತೆಲುಗಿನಲ್ಲಿ ಮಹಿಳಾ ಪ್ರಧಾನ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಈ ಮೂಲಕ ಫ್ಯಾನ್ಸ್ ಸಿಹಿಸುದ್ದಿ ನೀಡಿದ್ದಾರೆ.
ಆಮೀರ್ ಖಾನ್ ಪುತ್ರನ ಜೊತೆ ಮತ್ತು ‘ರಾಮಾಯಣ’ ಸಿನಿಮಾ ಕೆಲಸಗಳ ನಡುವೆ ವಿಭಿನ್ನ ಎನಿಸೋ ಮಹಿಳಾ ಪ್ರಧಾನ ಚಿತ್ರ ಒಪ್ಪಿಕೊಂಡಿದ್ದಾರೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಕಾರ್ತಿಕ್ ತೀಡಾ ಜೊತೆ ನಟಿ ಕೈಜೋಡಿಸಿದ್ದಾರೆ.
ಈ ಹಿಂದೆ ‘ಗಾರ್ಗಿ’ ಚಿತ್ರದಲ್ಲಿ ಸಾಯಿ ಪಲ್ಲವಿ ಮಹಿಳಾ ಪ್ರಧಾನ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದರು. ಈಗ ಹೊಸ ಸಿನಿಮಾದಲ್ಲೂ ಡಿಫರೆಂಟ್ ಆಗಿರುವ ಪಾತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಇನ್ನೂ ನಾಗಚೈತನ್ಯ ಜೊತೆಗಿನ 2ನೇ ಸಿನಿಮಾ ತಾಂಡೇಲ್ ಇದೇ ಫೆ.7ರಂದು ರಿಲೀಸ್ ಆಗಲಿದೆ.