ದೆಹಲಿ : ಒಮ್ಮೊಮ್ಮೆ ನಮ್ಮ ಕನಸನ್ನು ನನಸಾಗಿಸಿಕೊಳ್ಳಲು ತಮ್ಮ ವೃತ್ತಿಯನ್ನೇ ತೊರೆಯಬೇಕಾಗುತ್ತದೆ. ಈ ರೀತಿ ತಾನು ಮಾಡುತ್ತಿದ್ದ ವೃತ್ತಿಯನ್ನು ತೊರೆದು ಯುಪಿಎಸ್‌ಸಿ ಪರೀಕ್ಷೆ ಬರೆಯುವ ಮೂಲಕ ಐಎಎಸ್ ಅಧಿಕಾರಿಯಾದ ಆದರೆ ಸರ್ಜನಾ ಯಾದವ್ ಅವರ ಕಥೆ ಇದು.
ಸರ್ಜನಾ ಅವರು ದೆಹಲಿಯವರಾಗಿದ್ದು, ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಟಿಆರ್‌ಎಐನಲ್ಲಿ ಸಂಶೋಧನಾ ಅಧಿಕಾರಿಯಾಗಿ, ಅವರು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುತ್ತಾರೆ. ಆದರೆ ಐಎಎಸ್ ಅಧಿಕಾರಿಯಾಗಬೇಕೆಂಬ ಮಹತ್ವಾಕಾಂಕ್ಷೆ ಇದ್ದ ಅವರು, 2018 ರಲ್ಲಿ ತನ್ನ ಕೆಲಸವನ್ನು ತೊರೆಯುತ್ತಾರೆ.
ಯಾವುದೇ ಕೋಚಿಂಗ್ ಪಡೆಯದೇ ಯುಪಿಎಸ್‌ಸಿ ಪರೀಕ್ಷೆಗೆ ಸಂಜನಾ ಅವರು ತಯಾರಿ ಪ್ರಾರಂಭಿಸುತ್ತಾರೆ. 2019 ರಲ್ಲಿ 3ನೇ ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದ ಸರ್ಜನಾ ಅವರು 126ನೇ ರ‍್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ ಐಎಎಸ್ ಅಧಿಕಾರಿಯಾಗುವಲ್ಲಿ ಸಂಜನಾ ಅವರು ಯಶಸ್ವಿಯಾಗುತ್ತಾರೆ.
ಸಂಜನಾ ಅವರು ತನ್ನ ಗುರಿಯನ್ನು ಸಾಧಿಸಲು ಕೆಲಸವನ್ನು ತೊರೆಯುವ ದಿಟ್ಟ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಐಎಎಸ್ ಅಧಿಕಾರಿಯಾಗುವ ಅವರ ಪ್ರಯಾಣವು ಯುಪಿಎಸ್‌ಸಿ ಅಭ್ಯರ್ಥಿಗಳಿಗೆ ಸ್ಫೂರ್ತಿದಾಯಕವಾಗಿದೆ.