ಚಿತ್ರದುರ್ಗ : ಕೇಂದ್ರ ಎನ್ಡಿಎ ಸರ್ಕಾರದಿಂದ ದೇಶದ ಸಾಧನೆ ಆಗಿಲ್ಲ ವೈಯಕ್ತಿಕವಾಗಿ ಅವರಿಗೆ ಲಾಭ ಆಗಿರಬಹುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿಗೆ ಇಂದು ನಮ್ಮ ಪ್ರಧಾನಿ ಬರುತ್ತಿದ್ದಾರೆ ಸ್ವಾಗತಿಸುತ್ತೇವೆ ಮೆಟ್ರೋ ಯೋಜನೆ ಉದ್ಘಾಟನೆಗೆ ಮೋದಿ ಬರುತ್ತಿದ್ದಾರೆ ಅದು ಕರ್ನಾಟಕ ರಾಜ್ಯ ಸರ್ಕಾರದ ಕಾರ್ಯಕ್ರಮ ಯಾರು ಹೆಚ್ಚು ದುಡ್ಡು ಹಾಕಿರುತ್ತಾರೆ ಆ ಬಗ್ಗೆ ಹೇಳಬೇಕು ರಾಜ್ಯ ಸರ್ಕಾರದ ಮೈಲೇಜ್ ಹೆಚ್ಚಿರಬೇಕು, ಕೇಂದ್ರದ್ದು ಕಡಿಮೆಯಿದೆ ಮೋದಿ ಅವರಿಗೆ ಮೊದಲಿಂದಲೂ ಫ್ರೀ ಮೈಕೇಜ್ ಸಿಕ್ಕಿದೆ ಒಳಮೀಸಲಾತಿ ಜಾರಿ ಬಗ್ಗೆ ನಮ್ಮ ಸರ್ಕಾರದ ಬದ್ಧತೆ ಇದೆ ಸರ್ವ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾರಿ ಮಾಡಲಾಗುವುದೆಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.