ಬೆಂಗಳೂರು :ಸ್ಯಾಂಡಲ್‌ವುಡ್ ನಟಿ ಶರಣ್ಯ ಶೆಟ್ಟಿ ಹೆಸರನ್ನು ದುರ್ಬಳಕೆ ಮಾಡಿ ಖದೀಮರು ಹಣ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಹಿನ್ನೆಲೆ ನನ್ನ ಹೆಸರು ದುರ್ಬಳಕೆ ಆಗುತ್ತಿದೆ ಎಂದು ನಟಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಕಲಿ ನಂಬರ್ ತೆಗೆದುಕೊಂಡು ಅದಕ್ಕೆ ನಟಿಯ ಫೋಟೋ ಡಿಪಿ ಹಾಕಿ ವಂಚಕರು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಶರಣ್ಯ ಶೆಟ್ಟಿ ಹೆಸರು ಬಳಸಿ ವಂಚನೆ ಮಾಡುತ್ತಿದ್ದಾರೆ. ಟ್ರು ಕಾಲರ್‌ನಲ್ಲೂ ಶರಣ್ಯ ಶೆಟ್ಟಿ ಹೆಸರು ಹಾಕಿಕೊಂಡು ಹೀರೋಯಿನ್ಸ್ ಡಿಟೈಲ್ಸ್ ಪಡೆಯುತ್ತಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ.
ನನ್ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಆ ನಂಬರ್ ನನ್ನದಲ್ಲ. ಇದೊಂದು ನಕಲಿ ನಂಬರ್, ಅದನ್ನು ನಂಬಿ ಯಾರು ಹಣ ಕಳುಹಿಸಬೇಡಿ. ಅಂತಹ ಖದೀಮರ ವಿರುದ್ಧ ನಾನು ಸೈಬರ್ ಕ್ರೈಂನಲ್ಲಿ ದೂರು ನೀಡೋದಾಗಿ ನಟಿ ತಿಳಿಸಿದ್ದಾರೆ.