ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ದೊಡ್ಡ ಆಘಾತ ನೀಡಿದ್ದು ATM ಸೇರಿ ವಿವಿಧ ಡೆಬಿಟ್ ಕಾರ್ಡ್‌ಗಳ ವಾರ್ಷಿಕ ನಿರ್ವಹಣಾ ಶುಲ್ಕ ಹೆಚ್ಚಳ ಮಾಡುವುದಾಗಿ ಘೋಷಿಸಿದೆ.
ಡೆಬಿಟ್ ಕಾರ್ಡ್‌ಗಳ ವಾರ್ಷಿಕ ನಿರ್ವಹಣೆ ಶುಲ್ಕವನ್ನು 75ರೂ. ಹೆಚ್ಚಳ ಮಾಡಲಾಗಿದ್ದು ಏ.1ರಿಂದ ಜಾರಿಗೆ ಬರಲಿದೆ.
SBI ಕ್ಲಾಸಿಕ್, ಸಿಲ್ವರ್, ಗ್ಲೋಬಲ್, ಕಾಂಟ್ಯಾಕ್ಟ್‌ಲೆಸ್ ಡೆಬಿಟ್ ಕಾರ್ಡ್‌ಗಳ ಶುಲ್ಕ ಏರಿಕೆಯಾಗಿದ್ದು, ಇನ್ನುಮುಂದೆ 125ರೂ. ಇದ್ದ ಕ್ಲಾಸಿಕ್, ಸಿಲ್ವರ್ ಕಾರ್ಡ್‌ಗೆ ವಾರ್ಷಿಕ 200ರೂ. ನಿರ್ವಾಹಣಾ ಶುಲ್ಕದ ಜತೆಗೆ ಜಿಎಸ್‌ಟಿ ಪಾವತಿಸಬೇಕು.