ಧರ್ಮಸ್ಥಳ ಪ್ರಕರಣ ದಿನವೊಂದಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಇದೀಗ ಎಸ್ಐಟಿ ಅಧಿಕಾರಿಗಳು ಬಂಗ್ಲೆಗುಡ್ಡದಲ್ಲಿ ಶೋಧ ನಡೆಸಿದ್ದಾರೆ.
ಬಂಗ್ಲೆಗುಡ್ಡ ರಹಸ್ಯ ಬೇಧಿಸಲು ಎಸ್ಐಟಿ ತಂಡ ನೇತ್ರಾವತಿ ನದಿ ತಡದಲ್ಲಿರುವ ಈ ದಟ್ಟ ಕಾಡಿಗೆ ನುಗ್ಗಿದೆ. ಸೌಜನ್ಯ ಮಾವ ವಿಠಲ್ ಗೌಡ ಹೇಳಿಕೆ ಆಧರಿಸಿ ಶೋಧ ಕಾರ್ಯ ನಡೆಯುತ್ತಿದ್ದು, ಬಂಗ್ಲೆಗುಡ್ಡ ಕಾಡಿಗೆ ಎಂಟ್ರಿ ಕೊಟ್ಟ ಅರ್ಧಗಂಟೆಯಲ್ಲೇ ಮೂಳೆಗಳು ಪತ್ತೆಯಾಗಿದೆ ಎನ್ನಲಾಗ್ತಿದೆ ಬಂಗ್ಲೆ ಗುಡ್ಡದಲ್ಲಿ ವಿಠಲ ಗೌಡ ತೋರಿಸಿದ ಜಾಗದಲ್ಲಿ ಬುರುಡೆಗಳು ಮತ್ತು ಅಸ್ತಿ ಪಂಜರಗಳು ಪತ್ತೆಯಾಗಿವೆ ಎನ್ನಲಾಗಿದೆ.
13 ಎಕರೆ ವಿಸ್ತೀರ್ಣದ ಬಂಗ್ಲೆಗುಡ್ಡದಲ್ಲಿ 5 ಕಡೆ ಮಹಜರು ನಡೆದಿದೆ. ಈ ವೇಳೆ 5 ತಲೆಬುರಡೆ, 113 ಮೂಳೆಗಳು ಸಿಕ್ಕಿವೆ ಎನ್ನಲಾಗಿದೆ. ಧರ್ಮಸ್ಥಳದ ಬಂಗ್ಲೆ ಗುಡ್ಡದಲ್ಲಿ ಮತ್ತೆ 5 ಕಡೆಗಳಲ್ಲಿ ಮೂಳೆಗಳು ಪತ್ತೆಯಾಗಿವೆ, ಎಸ್ಐಟಿ ಮಹಜರು ವೇಳೆ ಅಸ್ತಿಪಂಜರದ ಅವಶೇಷಗಳು ಪತ್ತೆಯಾಗಿವೆ.
ಭೂಮಿಯ ಮೇಲ್ಭಾಗದಲ್ಲಿ ಅಸ್ತಿಪಂಜರದ ಅವಶೇಷಗಳು, ಮೂಳೆಗಳು ಸಿಕ್ಕಿದ್ದು, ಸುಕೋ ಟೀಮ್ ಸಿಕ್ಕ ಜಾಗದಲ್ಲಿ ಮಣ್ಣಿನ ಮಾದರಿ ಯನ್ನು ಸಂಗ್ರಹಿಸಲಾಗಿದೆ ಪೈಪ್ ಗಳಲ್ಲಿ ಮೂಳೆಗಳನ್ನು ಸಂಗ್ರಹಿಸಿದೆ.