ಬೆಂಗಳೂರು : ವೃತ್ತಿಯಲ್ಲಿ ವೈದ್ಯರಾಗಿದ್ದರು, ನಾಗರಿಕ ಸೇವೆಯತ್ತ ಕನಸು ಕಂಡು, ಅದರಲ್ಲೂ ಕನ್ನಡವನ್ನು ಮೇನ್ಸ್ ಐಚ್ಛಿಕವಾಗಿ ಆಯ್ಕೆ ಮಾಡಿಕೊಂಡು ಯುಪಿಎಸ್‌ಸಿ ಪರೀಕ್ಷೆ ಗೆದ್ದವರು ದಾವಣಗೆರೆ ಮೂಲದ ಡಾ ಎಲ್ ದಯಾನಂದ ರವರು. ಅವರು ಯುಪಿಎಸ್‌ಸಿ ಸಾಧನೆ ಕುರಿತು ಮಾಹಿತಿಗಳು ಇಲ್ಲಿವೆ.
ಕನ್ನಡವನ್ನು ಐಚ್ಛಿಕವಾಗಿ ಆಯ್ಕೆ ಮಾಡಿ ಪರೀಕ್ಷೆ ಬರೆದು ಯುಪಿಎಸ್‌ಸಿ ನಾಗರಿಕ ಸೇವೆಯನ್ನು 615ನೇ ರ‍್ಯಾಂಕ್‌ನಲ್ಲಿ ಪಾಸ್ ಮಾಡಿದವರು ಡಾ ಎಲ್ ದಯಾನಂದ ಸಾಗರ್ ರವರು. ದಯಾನಂದ ಸಾಗರ್ ರವರು ಮೂಲತಃ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮಾದೇನಹಳ್ಳಿಯವರು. 5ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ದಯಾನಂದ ಸಾಗರ್ ಅವರಿಗೆ ಕನ್ನಡ ಭಾಷೆಯ ಮೇಲೆ ಅತೀವ ವ್ಯಾಮೋಹ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಎಂಬಿಬಿಎಸ್ ಹಾಗೂ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿ 2 ವರ್ಷ ಸೇವೆ ಸಲ್ಲಿಸಿದ ಇವರು ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಭಾಷೆಯನ್ನೇ ಯುಪಿಎಸ್‌ಸಿ ಪರೀಕ್ಷೆಗೆ ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡು ಯಶಸ್ಸು ಪಡೆದಿದ್ದಾರೆ.
ವೈದ್ಯ ವೃತ್ತಿಯಲ್ಲಿರುವ ಡಾ ಎಲ್ ದಯಾನಂದರವರು ತಮ್ಮ ಸೇವೆಯ ನಡುವೆ ಬಿಡುವಿನ ವೇಳೆಯಲ್ಲಿ, ರಜಾ ದಿನಗಳಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ದೇಶದಲ್ಲಿ ಬೇಡಿಕೆಯ ಹಾಗೂ ಅತಿ ಹೆಚ್ಚು ಸಂಬಳ ಪಡೆಯುವ ಉದ್ಯೋಗದಲ್ಲಿದ್ದರು, ಅವರು ಸಿವಿಲ್ ಸೇವೆಗಳ ಕಡೆ ಮುಖ ಮಾಡಿ, ಕರ್ತವ್ಯದ ಜತೆ ಓದುತ್ತ ಇವರು ಸಾಧನೆ ಮಾಡಿರುವುದು ಯುವ ಆಕಾಂಕ್ಷಿಗಳಿಗೆ ಒಂದು ರೀತಿಯಲ್ಲಿ ಸ್ಪೂರ್ತಿ ಆಗಿದೆ.