ಲಂಡನ್: ಭಾರತೀಯ ಮೂಲದ ವೈದ್ಯೆಯೊಬ್ಬರು ಯುಕೆನಲ್ಲಿರುವ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್‌ನ 123ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಭಾರತೀಯ ಮೂಲದ ಡಾ.ಮುಮ್ತಾಜ್ ಪಟೇಲ್ ಈಗ ವಿಶ್ವದಾದ್ಯಂತ 40,000 ಸದಸ್ಯರನ್ನು ಪ್ರತಿನಿಧಿಸುವ ಯುಕೆ ವೈದ್ಯಕೀಯ ವೃತ್ತಿಪರ ಸದಸ್ಯತ್ವ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ.ಮುಮ್ತಾಜ್ ಪಟೇಲ್ ಅವರು ವಾಯುವ್ಯ ಇಂಗ್ಲೆಂಡ್‌ನ ಲಂಕಾಶೈರ್‌ನಲ್ಲಿ ಭಾರತೀಯ ವಲಸೆ ಪೋಷಕರಿಗೆ ಜನಿಸಿದರು, ಸದ್ಯ ಅವರು ಮ್ಯಾಂಚೆಸ್ಟರ್‌ನಲ್ಲಿ ಮೂತ್ರಪಿಂಡ ತಜ್ಞರಾಗಿದ್ದಾರೆ.
ಅಧ್ಯಕ್ಷೀಯ ಸ್ಪರ್ಧೆಯ ಮತದಾನ ಸೋಮವಾರ ಮುಕ್ತಾಯಗೊಂಡಿದ್ದು, ಮುಂದಿನ ನಾಲ್ಕು ವರ್ಷಗಳ ಅವಧಿಗೆ ಅಧ್ಯಕ್ಷಾಗಿ ಆಯ್ಕೆಯಾಗಿದ್ದಾರೆ. ಆದ್ರೆ ಅವರ ಕರ್ತವ್ಯ ದಿನಾಂಕವನ್ನು ಇನ್ನೂ ನಿಗಧಿಮಾಡಿಲ್ಲ ಎಂದು ವರದಿಗಳು ತಿಳಿಸಿವೆ